ಬೆಂಗಳೂರು, ಜ.19- ಕಾರೊಂದರ ಗಾಜು ಒಡೆದು ಡ್ಯಾಷ್ ಬೋರ್ಡ್‌ನಲ್ಲಿದ್ದ 5 ಲಕ್ಷ ರೂ. ಹಣ ಕಳವು ಮಾಡಿರುವ ಘಟನೆ ಶೇಷಾದ್ರಿಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರಿನವರಾದ ಗುತ್ತಿಗೆದಾರ ರಾಜಣ್ಣ ಹಣ ಕಳೆದುಕೊಂಡವರು.
ನಿನ್ನೆ ಸಂಜೆ ಆನಂದರಾವ್ ವೃತ್ತದಲ್ಲಿನ ಕಚೇರಿಯೊಂದಕ್ಕೆ ಬಂದಿದ್ದು, ಕಾರನ್ನು ನಿಲ್ಲಿಸಿ ಅರ್ಧಗಂಟೆ ನಂತರ ವಾಪಸ್ಸಾಗಿದ್ದಾರೆ. ಅಷ್ಟರಲ್ಲಿ ಕಳ್ಳರು ಕಾರಿನ ಗಾಜು ಒಡೆದು ಡ್ಯಾಷ್ ಬೋರ್ಡ್‌ನಲ್ಲಿದ್ದ 5 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದಾರೆ.
ಈ ಸಂಬಂಧ ರಾಜಣ್ಣ ಅವರು ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕ್ರಮಕೈಗೊಂಡಿದ್ದಾರೆ.