ಕರ್ನಾಟಕ

ಸಂಬಂಧಿಕರಿಂದಲೇ ಮಗು ಕಿಡ್ನಾಪ್ ಡ್ರಾಮ

Pinterest LinkedIn Tumblr

kidಬೆಂಗಳೂರು,  ಜ.12 – ಹಣಕ್ಕಾಗಿ ಮಗುವನ್ನು ಅಪಹರಿಸಿದ್ದ  ಸಂಬಂಧಿಯನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿಯ ಪ್ರಗತಿಪುರ ವಾಸಿ ರಘು (27) ಬಂಧಿತ ಆರೋಪಿ.

ಪೇಂಟರ್ ಆಗಿರುವ ಆರೋಪಿ ಹಣಕ್ಕಾಗಿ ದೂರದ ಸಂಬಂಧಿ ಅಕೌಂಟೆಂಟ್ ಆಗಿರುವ ಫ್ರಾನ್ಸಿಸ್ ಅವರ 4 ವರ್ಷದ ಮಗ ಜೋಶ್ವನನ್ನು ಅಪಹರಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಮಗು ಅಪಹರಿಸಿ ಫ್ರಾನ್ಸಿಸ್ ಅವರಿಗೆ ಕರೆ ಮಾಡಿ 7 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದು ಈ ಬಗ್ಗೆ ಮಗುವಿನ ತಂದೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ಪೊಲೀಸರು ಅಪಹರಣಕಾರರನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ.  ಆರ್.ಟಿ.ನಗರ ಠಾಣೆ ಇನ್ಸ್‌ಪೆಕ್ಟರ್ ಎಸ್.ಎಂ.ರಘುಪತಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

Write A Comment