ಕರ್ನಾಟಕ

ಖರ್ಗೆ ಬಂದ್ರೆ ಸಿಎಂ ಅಷ್ಟೇ ಅಲ್ಲ ಹೆಣ ಕೂಡಾ ಎದ್ದು ನಿಲ್ಲಬೇಕಿತ್ತು!

Pinterest LinkedIn Tumblr

kagodu-timmappaಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಬಂದರೆ ಸಿಎಂ ಏನು, ಹೆಣಾನೂ ಎದ್ದು ನಿಲ್ಲಬೇಕಿತ್ತು… ಅಂಥಾದ್ರಲ್ಲಿ ಸಂಸದರ ನಿಯೋಗ ಬಂದಿದ್ದನ್ನು ಯಾರೂ ಗಮನಿಸಲಿಲ್ಲ ಎಂದರೆ ಏನರ್ಥ? ಇದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪನವರ ಮಾತು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರಿಗೆ, ಸಂಸದರ ನಿಯೋಗ ವಿಧಾನಸೌಧಕ್ಕೆ ಬಂದಾಗ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್ ತಡವಾಗಿ ಬಂದಿದ್ದಲ್ಲದೇ. ಬಳಿಕ ಮಾಧ್ಯಮದವರನ್ನು ಕಂಡು ಓಡಿಹೋದ ಪ್ರಕರಣದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್, ಸಂಸದರ ನಿಯೋಗ ಬರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲವಾಗಿತ್ತು. ಮಾಹಿತಿ ಗೊತ್ತಿದ್ದರೆ ಮೊದಲೇ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವು ಎಂದರು. ಆದರೆ ಸಿಎಸ್ ಬ್ರಹ್ಮಾಂಡ ಬುದ್ಧಿವಂತ, ಮಾಧ್ಯಮಗಳನ್ನು ಕಂಡು ಯಾಕೆ ಹೆದರಿ ಓಡಬೇಕಿತ್ತು ಎಂದು ಪ್ರಶ್ನಿಸಿದರು.
-ಉದಯವಾಣಿ

Write A Comment