ಕರ್ನಾಟಕ

ಲಿಫ್ಟ್ ನಲ್ಲಿ ಸಿಲುಕಿದ್ದ ತಾಯಿ, ಮಗು ರಕ್ಷಣೆ

Pinterest LinkedIn Tumblr

 lift

ಬೆಂಗಳೂರು: ಅಪಾರ್ಟ್‍ಮೆಂಟ್‍ವೊಂದರ ಲಿಫ್ಟ್ ನಲ್ಲಿ ಸಿಲುಕಿದ್ದ ತಾಯಿ, ಎರಡು ವರ್ಷದ ಮಗುವನ್ನು ಅಗ್ನಿ- ಶಾಮಕ ಸಿಬ್ಬಂದಿ ಒಂದು ತಾಸು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಗುರುವಾರ ನಡೆದಿದೆ.

ಎಚ್‍ಎಸ್‍ಆರ್ ಲೈ ಔಟ್‍ನ ಮೂರನೇ ಹಂತದ ಶ್ರೀನಿವಾಸ ವೈಭವ ಅಪಾರ್ಟ್ ಮೆಂಟ್ ನಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಘಟನೆ ನಡೆದಿದೆ.

ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯಲ್ಲಿ ನೆಲೆಸಿರುವ ಬಾನು (27) ಅವರು ಬೆಳಗ್ಗೆ ಮಗಲು ಐಶಾನಿಯನ್ನು ಶಾಲಾ ಬಸ್ ಹತ್ತಿಸಲು ಲಿಫ್ಟ್ ಹತ್ತಿದ್ದರು. ಆದರೆ, ಲಿಫ್ಟ್ ಮೂರು ಮತ್ತು ಎರಡನೇ ಮಹಡಿ ನಡುವೆ ಏಕಾಕಿ ನಿಂತು ಬಿಟ್ಟಿತು. ಇದರಿಂದ ಬಾನು ಸಹಾಯಕ್ಕೆ ಕೂಡಿಕೊಂಡಿದ್ದಾರೆ. ತಕ್ಷಣ ಅಪಾರ್ಟ್ ಮೆಂಟ್ ಭದ್ರತಾ ಸಿಬ್ಬಂದಿ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕಾಮಿಸಿದ ಸಿಬ್ಬಂದಿ ಒಂದು ತಾಸು ಕಾರ್ಯಾಚರಣೆ ನಡೆಸಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಹೊರತಂದರು.

Write A Comment