ಕರ್ನಾಟಕ

ಕನ್ನಡಿಗರನ್ನೇ ಲೋಕಾಯುಕ್ತರನ್ನಾಗಿಸಲು ಒತ್ತಡವಿದೆ: ಸಿದ್ದರಾಮಯ್ಯ

Pinterest LinkedIn Tumblr

siddu-cm

ಬೆಂಗಳೂರು: ಕನ್ನಡಿಗರನ್ನೇ ಲೋಕಾಯುಕ್ತರನ್ನಾಗಿ ಮಾಡಿ ಎಂಬ ಒತ್ತಡವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ರಾಜ್ಯ ಲೋಕಾಯುಕ್ತ ನೇಮಕಾತಿ ಗೊಂದಲ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಲೋಕಾಯುಕ್ತ ನೇಮಕಾತಿಯಲ್ಲಿ ಕನ್ನಡಗರನ್ನೇ ನೇಮಕ ಮಾಡುವಂತೆ ಒತ್ತಡವಿದೆ. ಸಂಭಾವ್ಯ ಪಟ್ಟಿಯಲ್ಲಿ ಕನ್ನಡಿಗರ ಹೆಸರಿದೆ. ಈ ಬಗ್ಗೆ ಈಗಾಗಲೇ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಶೀಘ್ರದಲ್ಲೇ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದ್ದಾರೆ.

ಲೋಕಾಯುಕ್ತರಾಗಿದ್ದ ನ್ಯಾ. ವೈ.ಭಾಸ್ಕರ್ ಅವರು ಡಿಸೆಂಬರ್ 9 ರಂದು ರಾಜಿನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಹೊಸ ಲೋಕಾಯುಕ್ತರ ನೇಮಕ ಪ್ರಕ್ರಿಯೆ ನಡೆದಿದೆ. ಮೂಲಗಳ ಪ್ರಕಾರ ಎಸ್.ಆರ್.ನಾಯಕ್ ಅವರನ್ನು ನೇಮಕ ಮಾಡುವತ್ತ ಒಲವು ತೋರುತ್ತಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪ್ರತಿಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಆರೋಪ ಹೊತ್ತಿರುವವರ ನೇಮಕ ಬೇಡ: ಈಶ್ವರಪ್ಪ
ಲೋಕಾಯುಕ್ತ ನೇಮಕಾತಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷಗಳ ನಾಯಕ ಕೆ.ಎಸ್.ಈಶ್ವರಪ್ಪ ಅವರು, ಆರೋಪಗಳನ್ನು ಹೊತ್ತಿರುವವರನ್ನು ನೇಮಕ ಮಾಡಬಾರದು ಎಂದು ಹೇಳಿದ್ದಾರೆ.

ಎಸ್.ಆರ್.ನಾಯಕ್ ಅವರ ಮೇಲೆ ಈಗಾಗಲೇ ಹಲವು ಆರೋಪಗಳಿದ್ದು, ಅವರ ನೇಮಕ ಸರಿಯಲ್ಲ. ಆರೋಪ ಹೊತ್ತವರಿಗೆ ಲೋಕಾಯುಕ್ತ ಸ್ಥಾನ ನೀಡಬಾರದು, ಎಸ್.ಆರ್.ನಾಯಕ್ ಅವರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಉತ್ಸುಕರಾಗಿದ್ದಾರೆಂದು ಆರೋಪಿಸಿದ್ದಾರೆ.

Write A Comment