ಕರ್ನಾಟಕ

ಬೆಂಗಳೂರಿನಲ್ಲಿ ಲೋಕಾಯುಕ್ತ ದಾಳಿ । ಆರ್‌ಟಿಒ, ಅಬಕಾರಿ ಅಧಿಕಾರಿಗಳು ಬಲೆಗೆ

Pinterest LinkedIn Tumblr

balegeಬೆಂಗಳೂರು, ಡಿ.28- ಇಂದು ಬೆಳಗ್ಗೆ ಲೋಕಾಯುಕ್ತ ಪೊಲೀಸರು ಇಬ್ಬರು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಅಬಕಾರಿ ಇಲಾಖೆಯ ಜಾಗೃತ ದಳದ ಉಪ ಅಧೀಕ್ಷಕ ವೈ.ಭರತೇಶ್ ಅವರ ಶೇಷಾದ್ರಿಪುರಂನ, ಅಣ್ಣಯ್ಯಪ್ಪ ಬ್ಲಾಕ್‌ನಲ್ಲಿ ಮನೆ ಮೇಲೆ ಹಾಗೂ ಅವರ ಕೆಲ ಸಂಬಂಧಿಕರ ಮನೆ ಮೇಲೆ ಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಈ ಸಂದರ್ಭದಲ್ಲಿ ರಾಜ್ಯದ ಕೆಲವೆಡೆ ಇರುವಂತಹ ಸ್ವತ್ತುಗಳ ದಾಖಲೆ , ನಗದು ಹಾಗೂ ಕೆಲ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಜಯನಗರ ಆರ್‌ಟಿಒ ಕಚೇರಿಯ ಇನ್ಸ್‌ಪೆಕ್ಟರ್ ಜಯರಾಂ ಅವರ ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಲ್ಲ ಸಂದ್ರದ ಉದಯನಗರದಲ್ಲಿರುವ ಮನೆಯ ಮೇಲೆ ಮತ್ತೊಬ್ಬ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಈ ವೇಳೆ ಹಲವು ಪ್ರಮುಖ ದಾಖಲಾತಿಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ.

Write A Comment