ಕರ್ನಾಟಕ

ಅಕ್ರಮ ಸಂಬಂಧ : ಆಟೋ ಚಾಲಕನನ್ನು ಆಟೋ ಚಾಲಕನೇ ಇರಿದು ಕೊಂದ

Pinterest LinkedIn Tumblr

murderಬೆಂಗಳೂರು, ಡಿ.೨೪-ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಆಟೋ ಚಾಲಕನನ್ನು ಇರಿದು ಕೊಲೆ ಮಾಡಿರುವ ಘಟನೆ ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಯಾನಂದನಗರ ಕೊಳಗೇರಿ ವಾಸಿ ಜಾಫರ್ ಸಾದಿಕ್ (೩೬) ಕೊಲೆಯಾಗಿರುವ ಆಟೋ ಚಾಲಕ. ಆರೋಪಿ ತಬ್ರೇಜ್‌ನೂ ಆಟೋ ಚಾಲಕನಾಗಿದ್ದಾನೆ.

ಈತನ ಸಂಬಂಧಿ ಮಹಿಳೆಯೊಂದಿಗೆ ಜಾಫರ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ  ಸಂಬಂಧಿ ಮಹಿಳೆಯೊಂದಿಗೆ ಜಾಫರ್ ಇರುವುದನ್ನು ಕಂಡ ತಬ್ರೇಜ್ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ತಬ್ರೇಜ್ ಚಾಕುವಿನಿಂದ ಜಾಫರ್‌ನ ಎದೆ, ತಲೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಜಾಫರ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಈ ಸಂಬಂಧ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಸಿಕೊಂಡು ಪರಾರಿಯಾಗಿರುವ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Write A Comment