ರಾಷ್ಟ್ರೀಯ

ದೆಹಲಿಯಲ್ಲಿ ಜನವರಿ 1 ರಿಂದ ‘ಸರಿ-ಬೆಸ ಸಂಖ್ಯೆ ನಿಯಮ’ ಅನ್ವಯ

Pinterest LinkedIn Tumblr

araನವದೆಹಲಿ, ಡಿ.24-ಸಿಎನ್‌ಜಿ ಅಳವಡಿಕೆ ಹಾಗೂ ವಿಕಲಚೇತನ ಮಕ್ಕಳನ್ನು ಕೂರಿಸಿಕೊಂಡು ಮಹಿಳೆಯರು ಚಾಲನೆ ಮಾಡುವ ದ್ವಿಚಕ್ರವಾಹನಗಳ ಹೊರತಾಗಿ ಉಳಿದೆಲ್ಲಾ ವಾಹನಗಳಿಗೂ ಸರಿ-ಬೆಸ ಸಂಖ್ಯೆ ನಿಯಮ ಅನ್ವಯವಾಗಲಿದ್ದು, ಈ ಹೊಸ ನಿಯಮ 2016ರ  ಜನವರಿ 1 ರಿಂದ ಅನುಷ್ಠಾನಕ್ಕೆ ಬರಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.  ಈ ಹೊಸ ಯೋಜನೆ (ನಿಯಮ)ಜಾರಿಗೆ ಅಗತ್ಯವಾದ ಎಲ್ಲಾರೀತಿಯ ಅನುಮೋದನೆಗಳೂ ಈಗಾಗಲೇ ದೊರೆತಿದ್ದು, ಬರುವ ಸೋಮವಾರ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಕೇಜ್ರಿವಾಲ್ ಪ್ರಕಟಿಸಿದರು.

ಸರಿ-ಬೆಸ ಸಂಖ್ಯೆ ನಿಯಮದಡಿ ಕಾರುಗಳಿಗೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಈ ಕಾಯ್ದೆ ಅನ್ವಯವಾಗುತ್ತದೆ (ಭಾನುವಾರ ಹೊರತಾಗಿ) ಅದೇ ರೀತಿ ಹೊರರಾಜ್ಯದ ನಂಬರ್ ಪ್ಲೇಟ್ ಇರುವ ವಾಹನಗಳಿಗೆ ವಿನಾಯ್ತಿ ಇರುತ್ತದೆ. ನಿಯಮ ಉಲ್ಲಂಘನೆಗೆ 2 ಸಾವಿರ ರೂ. ದಂಡ ವಿಧಿಸಲಾಗುವುದು.  12 ವರ್ಷದೊಳಗಿನ ವಿಕಲಾಂಗ ಮಕ್ಕಳನ್ನು ಕರೆದುಕೊಂಡು ಹೋಗುವ ಮಹಿಳೆಯರ ಕಾರುಗಳಿಗೆ ವಿನಾಯ್ತಿ ಇರುತ್ತದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಮುಖ್ಯ ನ್ಯಾಯಾಧೀಶರು, ಕೇಂದ್ರ ಸಚಿವರು, ರಾಜ್ಯಪಾಲರು ಹಾಗೂ ಹೊರರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಈ ನಿಯಮದಿಂದ ವಿನಾಯ್ತಿ ಪಡೆಯಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.  ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

Write A Comment