ಕರ್ನಾಟಕ

ಜನತಾ ಪರಿವಾರ ಒಗ್ಗೂಡುವಿಕೆ ಸಭೆಗೆ ದೇವೇಗೌಡರ ಮೆಚ್ಚುಗೆ

Pinterest LinkedIn Tumblr

deve

ಹಾಸನ, ಡಿ.18- ಜನತಾ ಪರಿವಾರ ಒಗ್ಗೂಡಬೇಕೆಂಬ ಉದ್ದೇಶದಿಂದ ನಿನ್ನೆ ಮುಖಂಡರು ನಡೆಸಿರುವ ಸಭೆ ಒಳ್ಳೆಯ  ಬೆಳವಣಿಗೆ ಯಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ತಿನ ಜೆಡಿಎಸ್ ಅಭ್ಯರ್ಥಿ ಪಟೇಲ್ ಶಿವರಾಂ ಅವರ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಗೌಡರು,  ಸುದ್ದಿಗಾರರೊಂದಿಗೆ  ಮಾತ ನಾಡುತ್ತಾ ಈ ವಿಷಯ ತಿಳಿಸಿದರು. ಮಾಜಿ ಶಾಸಕ ಮಹಿಮಾಪಟೇಲ್ ಅವರ ನಿವಾಸದಲ್ಲಿ ಜನತಾ ಪರಿವಾರದ ಕೆಲ ಮುಖಂಡರು ಸಭೆ ನಡೆಸಿ ರಾಜ್ಯದಿಂದಲೇ ಜನತಾ ಪರಿವಾರ ಒಗ್ಗೂಡುವ ಪ್ರಕ್ರಿಯೆ ಆರಂಭಿಸಬೇಕೆಂಬ ಬಗ್ಗೆ ಚರ್ಚೆ ನಡೆಸಿರುವುದು ತಮಗೆ ಸಂತೋಷ ತಂದಿದೆ ಎಂದು ಹೇಳಿದರು.

ರಾಜ್ಯ ಮಟ್ಟದಲ್ಲಿ ಜನತಾ ಪರಿವಾರ  ಒಂದಾಗಬೇಕು ಎಂಬುದು ಎಲ್ಲರ ಆಸೆಯಾಗಿದೆ. ಅದಕ್ಕೆ ತಮ್ಮದೂ ಕೂಡ ಸಹಮತ ವಿದೆ. ಆದರೆ, ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಕೇರಳದ ಚುನಾವಣೆ ಹಿನ್ನೆಲೆಯಲ್ಲಿ ಸಧ್ಯಕ್ಕೆ ಈಗ ಹೊಂದಾಣಿಕೆ ಪ್ರಕ್ರಿಯೆ ಸಾಧ್ಯವಿಲ್ಲ. ಹೊಂದಾಣಿಕೆ ಕುರಿತಂತೆ ಜೆಡಿಯು ಜತೆ ಮಾತುಕತೆ ನಡೆಸಲು ಸಿದ್ಧವಿರು ವುದಾಗಿ ಗೌಡರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಜೆಡಿಯು ಮತ್ತು ಜೆಡಿಎಸ್ ಪಕ್ಷಗಳೆರಡೂ ಒಗ್ಗೂಡಿದರೆ ಜನತಾ ಪರಿವಾರ ಒಗ್ಗೂಡಿದಂತಾಗುವುದಿಲ್ಲ. ಜನತಾ ಪರಿವಾರದಿಂದ ಪ್ರತ್ಯೇಕವಾಗಿರುವ ಪ್ರಾದೇಶಿಕ ಪಕ್ಷಗಳು ಒಂದೇ ವೇದಿಕೆಯಲ್ಲಿ ಸೇರಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕಾಗಿದೆ ಎಂದರು. ಜೆಡಿಎಸ್ ಪಕ್ಷ ಬಲವರ್ಧನೆಗೆ ರಾಜ್ಯದಲ್ಲೂ ಕೂಡ ಹೊಸ ತಂತ್ರಜ್ಞಾನ  ಳಸಿಕೊಳ್ಳಲಾಗುವುದು. ಆ ನಿಟ್ಟಿನಲ್ಲಿ ಪ್ರಯತ್ನವನ್ನು ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ವೇಳೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಚಾರ ನಡೆಸಿದ್ದರು. ಅದರ ಪ್ರಯತ್ನದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತಂದರಲ್ಲದೆ, ಪ್ರಧಾನಿ ಕೂಡ ಆಗಿದ್ದಾರೆ. ಯುವ ಜನತೆ ತಂತ್ರಜ್ಞಾನದ ಕಡೆ ವಾಲುತ್ತಿರುವುದರಿಂದ ನಮ್ಮ ಪಕ್ಷಕ್ಕೂ ಕೂಡ ನೂತನ ತಂತ್ರಜ್ಞಾನಗಳ ಅಳವಡಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.

Write A Comment