ಕರ್ನಾಟಕ

ರಾಜಧಾನಿ ಬೆಂಗಳೂರಿನಲ್ಲಿ ಹಾಪ್​ಕಾಮ್ಸ್​ನಲ್ಲಿ ಹಣ್ಣು, ತರಕಾರಿ ಅಗ್ಗ

Pinterest LinkedIn Tumblr

hop

ಬೆಂಗಳೂರು: ರಾಜಧಾನಿಯ ಹಾಪ್​ಕಾಮ್್ಸ ಮಳಿಗೆಗಳಲ್ಲಿ ಡಿ.26ರವರೆಗೆ 10 ದಿನ ಶೇ.10 ರಿಯಾಯಿತಿ ಬೆಲೆಯಲ್ಲಿ ತರಕಾರಿ ಹಾಗೂ ಬಾಳೆಹಣ್ಣು, ಕಿತ್ತಳೆ, ಸಪೋಟ ಹಣ್ಣುಗಳು ದೊರೆಯಲಿವೆ.

ಸಂಕಷ್ಟದಲ್ಲಿರುವ ರೈತರ ನೆರವಿಗಾಗಿ ಹಾಪ್​ಕಾಮ್್ಸ ಮೊದಲ ಬಾರಿಗೆ ಆಯೋಜಿಸಿರುವ ಋತುಮಾನದ ‘ತೋಟೋತ್ಪನ್ನಗಳ ಮೇಳ’ಕ್ಕೆ ಗುರುವಾರ ಲಾಲ್​ಬಾಗ್​ನ ಹಾಪ್​ಕಾಮ್್ಸ ಕೇಂದ್ರ ಕಚೇರಿಯಲ್ಲಿ ತೋಟಗಾರಿಕೆ ಇಲಾಖೆ ನಿರ್ದೇಶಕ ಎಸ್.ಬಿ. ಬೊಮ್ಮನಹಳ್ಳಿ ಚಾಲನೆ ನೀಡಿದರು.

ಬಾಳೆ, ಕಿತ್ತಳೆ, ಸಪೋಟ ಹಾಗೂ ತರಕಾರಿ ಬೆಲೆ ಕುಸಿತಗೊಂಡು ರೈತರು ಕಂಗಾಲಾಗಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಉತ್ತಮ ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ಮೇಳ ಏರ್ಪಡಿಸಿದೆ. ಮೇಳದಲ್ಲಿ ರೈತರ ಬೆಳೆಗಳನ್ನು ನೇರವಾಗಿ ಖರೀದಿಸಿ ಮಾರಾಟ ಮಾಡಲಿದೆ.

ಪ್ರಸಕ್ತ ಹಂಗಾಮಿನ ಬೆಳೆಗಳಾದ ಬಾಳೆಹಣ್ಣು, ಕಿತ್ತಳೆ, ದಾಳಿಂಬೆ, ಸಪೋಟ, ಕಡ್ಲೆಕಾಯಿ, ಅವರೆಕಾಯಿ, ಅವರೆಬೇಳೆ, ಗೆಣಸು ಮುಂತಾದ ಉತ್ಪನ್ನಗಳು ಲಭ್ಯ. ಹಡ್ಸನ್ ಸರ್ಕಲ್, ಲಾಲ್​ಬಾಗ್, ದೇವನಹಳ್ಳಿ ಹೈವೆ, ಸ್ಯಾಂಕಿ ಟ್ಯಾಂಕ್, ಮಲ್ಲೇಶ್ವರ, ನಾಗರಬಾವಿ ಸರ್ಕಲ್, ಕೆಂಗೇರಿ ಸೆಟಲೈಟ್ ಬಸ್ ನಿಲ್ದಾಣ ಬಳಿ, ಮೈಸೂರು ರಸ್ತೆ ಹೈವೇ, ಚಂದ್ರಾ ಲೇಔಟ್ ಹಾಪ್​ಕಾಮ್್ಸ ಮಳಿಗೆಗಳಲ್ಲಿ ಖರೀದಿಸಬಹುದು. ಶನಿವಾರ ಮತ್ತು ಭಾನವಾರ ಕಬ್ಬನ್ ಪಾರ್ಕ್ ಮತ್ತು ಜಾನಪದ ಲೋಕದಲ್ಲಿ ಲಭ್ಯವಿರá-ತ್ತದೆ.

ಬಾಳೆ ಬೆಳೆದ ರೈತರು ಬೆಲೆ ಇಳಿಕೆಯಿಂದ ಸಂಕಷ್ಟದಲ್ಲಿ ದ್ದಾರೆ. ರೈತರ ನೆರವಿಗಾಗಿ ಮೇಳ ಆಯೋಜಿಸಿದ್ದೇವೆ. ಮೇಳಕ್ಕಾಗಿ ನಿತ್ಯ 20 ಟನ್ ಬಾಳೆ ಖರೀದಿಸಲಾಗುತ್ತಿದೆ. ನಿತ್ಯ 50ರಿಂದ 60 ಟನ್ ಹಣ್ಣು, ತರಕಾರಿ ಮಾರಾಟವಾಗುತ್ತಿದೆ ಎಂದು ಹಾಪ್​ಕಾಮ್್ಸ ಅಧ್ಯಕ್ಷ ಶ್ರೀನಿವಾಸನ್ ತಿಳಿಸಿದರು.

ಹಾಪ್​ಕಾಮ್್ಸ ವ್ಯವಸ್ಥಾಪಕ ನಿರ್ದೇಶಕ ಡಾ. ಬೆಳ್ಳೂರು ಕೃಷ್ಣ, ಪರಿಸರತಜ್ಞ ಯಲ್ಲಪ್ಪ ರೆಡ್ಡಿ ಮತ್ತಿತರರಿದ್ದರು. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ದೃಷ್ಟಿಯಿಂದ ಮೇಳ ಆಯೋಜಿಸಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತರೆ ಇನ್ನಷ್ಟು ದಿನ ಮುಂದುವರಿಸಲಾಗುವುದು.

| ಜಿ.ಆರ್. ಶ್ರೀನಿವಾಸನ್ ಹಾಪ್​ಕಾಮ್್ಸ ಅಧ್ಯಕ್ಷ

ಹಾಪ್​ಕಾಮ್್ಸ ದರ (ಕೆ.ಜಿ.ಗೆ)

ಹೆಸರು ದರ ರಿಯಾಯ್ತಿ ದರ ಪಚ್ಚೆ ಬಾಳೆ 16 14

ಏಲಕ್ಕಿ ಬಾಳೆ 34 31

ಕಿತ್ತಳೆ 30 27

ಸಪೋಟ 33 30

ಪೈನಾಪಲ್ 36 32

ಆಲೂಗಡ್ಡೆ 35 32

ಅವರೆಕಾಯಿ 50 45

ಅವರೆಬೇಳೆ 220 200

Write A Comment