ಕರ್ನಾಟಕ

ಪ್ರಿಯಕರನ ಸಾವಿನಿಂದ ನೊಂದು 11 ಮಹಡಿಯಿಂದ ಜಿಗಿದು ಆತ್ಮಹತ್ಯೆ ಯುವತಿ; ಡೆತ್ ನೋಟ್ ನಲ್ಲಿ ಬರೆದದ್ದು ಏನು…?

Pinterest LinkedIn Tumblr

pooja111

ಬೆಂಗಳೂರು: ಪ್ರಿಯಕರನ ಸಾವಿನಿಂದ ಮನನೊಂದ ಯುವತಿಯೊಬ್ಬಳು ಬೆಂಗಳೂರಿನ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಕಸ್ತೂರಿಬಾ ರಸ್ತೆಯ ಒಬೆಲಿಸ್ಕ್ ಬಿಲ್ಡಿಂಗ್ ನ ಹತ್ತನೇ ಮಹಡಿಯಿಂದ ಬಿದ್ದು ಬ್ಯಾಟರಾಯನಪುರದ 24 ವರ್ಷದ ಪೂಜಾ ಎಂಬುವರು ಮೃತಪಟ್ಟಿದ್ದಾರೆ. ಪೂಜಾ ತಾವು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಚರಣ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಡಿಸೆಂಬರ್ 5ರಂದು ಚರಣ್ ಯಲಹಂಕದ ಹುಣಸೆಮಾರನಹಳ್ಳಿ ಬಳಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಈ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೂಜಾ ಚರಣ್ ಇಬ್ಬರು ಕಸ್ತೂರಿಬಾ ರಸ್ತೆಯ ಒಬೆಲಿಸ್ಕ್ ಬಿಲ್ಡಿಂಗ್ ನ 5ನೇ ಅಂತಸ್ತಿನಲ್ಲಿದ್ದ ಬಾಬಾ ಬಾಜ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾವಿಗೂ ಮುನ್ನ ಡೆತ್ ನೋಟ್ ಬರೆದಿರುವ ಪೂಜಾ ಐ ಆ್ಯಮ್ ಸಾರಿ ನೀನಿಲ್ಲದೆ ಬದುಕಿರುವುದು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೂಜಾ ಅವರ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Write A Comment