ಕರ್ನಾಟಕ

4 ಅಂತಸ್ತಿನ ಕಟ್ಟಡದಿಂದ ಕೆಳಗೆ ಬಿಳುತಿದ್ದ ಮಗುವನ್ನು ಕ್ಯಾಚ್ ಹಿಡಿದು ಕಾಪಾಡಿದ ರಿಯಲ್ ಹೀರೋ

Pinterest LinkedIn Tumblr

go

ಗೌರಿಬಿದನೂರು, ಡಿ.6: ನಾಲ್ಕು ಅಂತಸ್ತಿನ ಕಟ್ಟಡದಿಂದ ನಾಲ್ಕು ವರ್ಷದ ಮಗುವೊಂದು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದು, ಪೌರಕಾರ್ಮಿಕನ ಸಮಯ ಪ್ರಜ್ಞೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ನಡೆದಿದ್ದೇನು: ಪಟ್ಟಣದ ನ್ಯಾಷನಲ್ ಕಾಲೇಜು ಮುಂಭಾಗದಲ್ಲಿನ ಎರಡನೇ ಹಂತಸ್ಥಿನಲ್ಲಿರುವ ಖಾಸಗಿ ಫೈನಾನ್ಸ್ ನಲ್ಲಿ ಮಂಚೇನಹಳ್ಳಿ ಹೋಬಳಿಯ ಸರೋಜಮ್ಮನವರು ತಮ್ಮ ಜೊತೆ 4 ವರ್ಷದ ಮೊಮ್ಮಗಳು ಭಾರ್ಗವಿಯನ್ನು ಕರೆತಂದಿದ್ದರು. ಫೈನಾನ್ಸ್ ಕಚೇರಿಯಲ್ಲಿ ವ್ಯವಹಾರ ನಡೆಸುತ್ತಿದ್ದ ಸಂದರ್ಬದಲ್ಲಿ ಭಾರ್ಗವಿ ಆಟವಾಡಿಕೊಂಡು 4ನೇ ಅಂತಸ್ತಿಗೆ ಹೋಗಿದ್ದಾಳೆ, ಅಲ್ಲಿನ ಗ್ರಿಲ್ಸ್ ಬಳಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಹೊರಗೆ ಬಂದಿದ್ದಾಳೆ. ಮಗುವಿನ ಅಂಗಿ ಗ್ರಿಲ್‌ಗೆ ತಗುಲಿಕೊಂಡು ಮಗು ಚೀರಾಡುತ್ತಿದ್ದನ್ನು ಎದುರುಗಡೆ ಪೌರ ನೌಕರ ನೀರಿನ ಪೈಪ್ ಲೈನ್ ರಿಪೇರಿ ಮಾಡುತ್ತಿದ್ದ ಮಹೇಶ್ ಓಡಿ ಬಂದು ಕೇಳಗೆ ಬೀಳುತ್ತಿದ್ದ ಮಗುವನ್ನು ತಮ್ಮ ಕೈಯಲ್ಲಿ ಕ್ಯಾಚ್ ಹಿಡಿದುಕೊಂಡಿದ್ದಾನೆ.

ಕೆಲ ಕ್ಷಣಗಳ ಕಾಲ ಸುತ್ತ ಮುತ್ತಲ ಅಂಗಡಿಗಳವರು ಮತ್ತು ನಾಗರಿಕರು ಭಯಭೀತರಾಗಿ ವೀಕ್ಷಿಸಿದರು. ಕಟ್ಟಡದ ಪಕ್ಕದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಮಗು ಅಕಸ್ಮಾತ್ ಪೌರಕಾರ್ಮಿಕನ ಕಣ್ಣಿಗೆ ಕಾಣದಿದ್ದಲ್ಲಿ ಮಗು ಘೋರವಾಗಿ ಸಾವನ್ನಪ್ಪುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಪುರಸಭೆ ಮುಖ್ಯಾಧಿಕಾರಿ ಹೆಚ್.ಸಿ.ಹನುಮಂತೇಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದು ಪೌರಕಾರ್ಮಿಕನನ್ನು ಅಭಿನಂದಿಸಿದರು.

Write A Comment