ಕರ್ನಾಟಕ

ಕೂಡ್ಲಿಗಿಯಲ್ಲಿ ಕೊಳವೆಬಾವಿಯಲ್ಲಿ ಚಿಮ್ಮಿದ ಮೀನುಗಳು… ಅಚ್ಚರಿ ಮೂಡಿಸಿದ ಘಟನೆ

Pinterest LinkedIn Tumblr

fish

ಕೂಡ್ಲಿಗಿ: ಬಿ. ನರಸಿಂಹಪ್ಪನವರ ರಾಘವೇಂದ್ರ ತಮ್ಮ ಜಮೀನಿನಲ್ಲಿ ಬುಧವಾರ ರಾತ್ರಿ ಕೊರೆಸಿದ 220 ಅಡಿ ಬಾವಿಯಿಂದ ನೀರಿನ ಬುಗ್ಗೆಯೊಂದಿಗೆ ಮೀನೂಗಳು ಹೊರಬಂದು ಅಚ್ಚರಿ ಮೂಡಿಸಿದವು.

ಸೀಮೆಯಲ್ಲಿ ಎಷ್ಟೇ ಆಳಕ್ಕೆ ಕೊರೆಸಿದರೂ ನೀರು ಸಿಗುವುದೇ ಕಷ್ಟ. ಈ ಜಮೀನಿನ ಪಕ್ಕದಲ್ಲೂ ನೀರಿನ ಯಾವ ಸೆಲೆಯೂ ಇಲ್ಲ. ಹೀಗಿರುವಾಗ ತಮ್ಮ ಕೊಳವೆ ಬಾವಿಯಲ್ಲಿ ಬೊಗಸೆಗಟ್ಟಲೇ ಮೀನುಗಳು ಬಂದಿದ್ದು ಶುಭ ಸಂಕೇತ ಎಂದು ರಾಘವೇಂದ್ರ ಭಾವಿಸಿದ್ದಾರೆ.

ನೀರಿನೊಂದಿಗೆ ಚಿಮ್ಮುತ್ತಿದ್ದ ಮೀನುಗಳನ್ನು ಕೆಲವರು ಕೈಯಲ್ಲಿ ಹಿಡಿದು ಸಂತಸಪಟ್ಟರು. ಇನ್ನೂ ಕೆಲವರು ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡರು. ಇನ್ನೂರು ಅಡಿಗೆ ನೀರು ಸಿಕ್ಕಿತ್ತು.ಮುಂದೆ ಅಂತರ್ಜಲ ಕುಸಿದರೆ ಕಷ್ಟ ಎಂದು ಭಾವಿಸಿ, ಇನ್ನೂ 20 ಅಡಿ ಕೊರೆಸಲು ನಿರ್ಧರಿಸಿದೆವು. ನೀರೂ ಹೆಚ್ಚಾಯಿತು, ಮೀನುಗಳೂ ಚಿಮ್ಮಿದವು ಎಂದು ರಾಘವೇಂದ್ರ ತಿಳಿಸಿದರು.

Write A Comment