ಕರ್ನಾಟಕ

ಸಚಿವ ಸೊರಕೆ ವಿರುದ್ಧ ರಮೇಶ್‌ಕುಮಾರ್ ಗರಂ

Pinterest LinkedIn Tumblr

rameshಬೆಂಗಳೂರು, ನ.23: ರಾಜ್ಯ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ-2015ನ್ನು ಮಂಡಿಸಿದ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ವಿರುದ್ಧ ಆಡಳಿತ ಪಕ್ಷದ ಹಿರಿಯ ಶಾಸಕ ರಮೇಶ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಜರಗಿದೆ.

ಸೋಮವಾರ ವಿಧಾನಸಭೆಯಲ್ಲಿ ವಿನಯಕುಮಾರ್ ಸೊರಕೆ ಮಂಡಿಸಿದ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಮೇಶ್‌ಕುಮಾರ್, ಇಂತಹ ಸೂಕ್ಷ್ಮ ಸಂಗತಿಗಳನ್ನು ಹೊಂದಿರುವ ವಿಧೇಯಕಗಳ ಮಂಡನೆಗೆ ಮುಂಚಿತವಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಬೇಕಿತ್ತು. ಏಕಾಏಕಿ ಇಂತಹ ವಿಧೇಯಕ ಮಂಡನೆ ಸರಿಯಲ್ಲ ಎಂದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ವ್ಯವಸ್ಥೆ ಯನ್ನು ಬಲಪಡಿಸುವ ನಿಟ್ಟಿನಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಈ ಸದನದಲ್ಲಿ ವಿಧೇಯಕವನ್ನು ಮಂಡಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸುವ ವಿಧೇಯಕವನ್ನು ತರುವುದು ಸಮಂಜಸವಲ್ಲ ಎಂದು ಅವರು ಹೇಳಿದರು.

ರಾಹುಲ್ ಗಾಂಧಿಗೆ ದೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವ್ಯವಸ್ಥೆ ಬಲವರ್ಧನೆ ಕುರಿತು ನಾವು ನೀಡಿರುವ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡುವಂತೆ ಸೂಚನೆ ನೀಡಿದ್ದರು. ಆದರೆ, ಈ ವಿಧೇಯಕವನ್ನು ತರುವ ಮೂಲಕ ನೀವು ರಾಹುಲ್‌ಗಾಂಧಿಯ ವಿರುದ್ಧ ಹೋಗುತ್ತಿದ್ದೀರಾ, ಅವರಿಗೆ ದೂರು ನೀಡಬೇಕಾಗುತ್ತದೆ ಎಂದು ರಮೇಶ್‌ಕುಮಾರ್ ಎಚ್ಚರಿಕೆ ನೀಡಿದರು.

ಸೊರಕೆ ಬೆಂಬಲಕ್ಕೆ ನಿಂತ ಬೃಹತ್ ಮತ್ತು ಮಧ್ಯಮ ಕೈಗಾ ರಿಕಾ ಸಚಿವ ದೇಶಪಾಂಡೆ, ಸ್ಥಳೀಯ ಸಂಸ್ಥೆಗಳ ಅಧಿಕಾರ ಮೊಟ ಕುಗೊಳಿಸುವ ಯಾವ ಉದ್ದೇಶವು ಸರಕಾರಕ್ಕಿಲ್ಲ ಕೈಗಾರಿಕೆಗಳ ಒಕ್ಕೂಟದ ಮನವಿಯ ಹಿನ್ನೆಲೆಯಲ್ಲಿ ಈ ತಿದ್ದುಪಡಿ ವಿಧೇಯಕ ತರುತ್ತಿದ್ದೇವೆ ಎಂದರು. ಆನಂತರ, ವಿಧಾನಸಭೆಯಲ್ಲಿ ವಿಧೇ ಯಕಕ್ಕೆ ಅನುಮೋದನೆ ಪಡೆದುಕೊಳ್ಳಲಾಯಿತು.

Write A Comment