ಕರ್ನಾಟಕ

ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಪದಚ್ಯುತಿ: ವಿಪಕ್ಷ ಪ್ರಸ್ತಾಪ ಅಂಗೀಕರಿಸಿದ ಸ್ಪೀಕರ್

Pinterest LinkedIn Tumblr

Kagodu____ಬೆಂಗಳೂರು, ನ.23: ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿರುವ ‘ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಪದಚ್ಯುತಿ’ ಸಂಬಂಧ ವಿಪಕ್ಷಗಳು ಮಂಡಿಸಿದ ಪ್ರಸ್ತಾವವನ್ನು ಆಡಳಿತ ಪಕ್ಷವನ್ನು ಹೊರಗಿಟ್ಟು ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಂಗೀಕರಿಸಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದ ಬಳಿಕ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಜೆಡಿಎಸ್ ಉಪ ನಾಯಕ ವೈ.ಎಸ್.ವಿ.ದತ್ತಾ, ‘1984ನೆ ಕರ್ನಾಟಕ ಲೋಕಾಯುಕ್ತ ಅಧಿನಿಯಮ (ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ಅಧಿನಿಯಮ-2015)ದ ನಿಯಮ 6ರ ಅವಕಾಶ ಗಳಡಿ ಲೋಕಾಯುಕ್ತ ಪದಚ್ಯುತಿ ಪ್ರಸ್ತಾವ ಮಂಡಿಸಿದರು.
ಉಭಯ ನಾಯಕರು ಮಂಡಿಸಿದ ಪ್ರಸ್ತಾವವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಕೂಡಲೇ ಸ್ಪೀಕರಿಸಿದರು.

ಒಮ್ಮತದ ತೀರ್ಮಾನ ಕೈಗೊಳ್ಳಿ: ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜಯಚಂದ್ರ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿರುವ ಭಾಸ್ಕರ್ ರಾವ್ ಪದಚ್ಯುತಿ ಪ್ರಸ್ತಾವಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ, ಸ್ವೀಕಾರಕ್ಕೆ ಮುನ್ನ ಮತ್ತೊಮ್ಮೆ ಸಾಧಕ-ಬಾಧಕಗಳನ್ನು ಪರಾಮರ್ಶಿಸಬೇಕು ಎಂದು ಮನವಿ ಮಾಡಿದರು.

Write A Comment