ಕರ್ನಾಟಕ

ಟಿಪ್ಪು ಹಿಂದೂ ಆರಾಧಕ: ಪಾಪು

Pinterest LinkedIn Tumblr

papuಹುಬ್ಬಳ್ಳಿ: ಟಿಪ್ಪು ಸುಲ್ತಾನ ಧರ್ಮಾಂಧ, ಮತಾಂತರಿ ಆಗಿರಲಿಲ್ಲ. ಅವನೊಬ್ಬ ಹಿಂದೂಗಳ ಆರಾಧಕ. ರೈತರು, ಹಿಂದುಳಿದ ಜನರ ಉದಾಟಛಿರಕ. ಆದ್ದರಿಂದಲೇ ಮೈಸೂರಿನ ದೊರೆಗಳು ಕೂಡ ಆತನ ಆಡಳಿತವನ್ನೇ ಅನುಕರಿಸುತ್ತಿದ್ದರು ಎಂದು ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.

ಟಿಪ್ಪು ಸುಲ್ತಾನ್‌ 126ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮರಾಠಾ ಸೈನಿಕರು ಶೃಂಗೇರಿ ಶಾರದಾ ಪೀಠದಲ್ಲಿ ಸಂಪತ್ತು ಇದೆಯೆಂದು
ಅದರ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದರು. ಅಲ್ಲಿನ ಶಾರದಾ ವಿಗ್ರಹ ಹಾಳು ಮಾಡಿದ್ದರು. ಆಗ ಅಲ್ಲಿನ ಗುರುಗಳು ಮಂಗಳೂರಿಗೆ ತೆರಳಿ ಆಶ್ರಯ ಪಡೆದಿದ್ದರು. ಟಿಪ್ಪು ಸುಲ್ತಾನ್‌ ಶ್ರೀಗಳನ್ನು ಪುನಃ ಪೀಠಕ್ಕೆ ಕರೆಯಿಸಿ, ಶೃಂಗೇರಿ ದೇವಸ್ಥಾನಕ್ಕೆ ಬಹಳಷ್ಟು ದತ್ತಿ ಕೊಟ್ಟು ಪುನರ್‌ ಅಭಿವೃದಿಟಛಿಪಡಿಸಿದ್ದ ಎಂದರು.

ಟಿಪ್ಪು ತನ್ನ ಆಸ್ಥಾನದಲ್ಲಿ ಹಿಂದೂಗಳನ್ನೇ ನಾಯಕ ರನ್ನಾಗಿ ಮಾಡಿಕೊಂಡಿದ್ದ. ಆತ ಶ್ರೀರಂಗಪಟ್ಟಣ, ಹುಬ್ಬಳ್ಳಿ-ಧಾರವಾಡ ಹಾಗೂ ಚಿತ್ರದುರ್ಗದಲ್ಲಿ ಯಾವ ದೇವಸ್ಥಾನಗಳನ್ನೂ ಹಾಳು ಮಾಡಲಿಲ್ಲ. ಆದರೆ, ಆತ ಬ್ರಿಟಿಷರಿಗೆ ದುಃಸ್ವಪ್ನವಾಗಿದ್ದ.
ಆದ್ದರಿಂದ ಅವರು ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದರು ಎಂದು
ಹೇಳಿದರು.
-ಉದಯವಾಣಿ

Write A Comment