ಮನೋರಂಜನೆ

ಹುಚ್ಚ ವೆಂಕಟ್ ಜಾಮೀನು ತೀರ್ಪು ನ.25ಕ್ಕೆ ಕಾಯ್ದಿರಿಸಿದ ಕೋರ್ಟ್

Pinterest LinkedIn Tumblr

IMG_1174ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ, ಹುಚ್ಚ ವೆಂಕಟ್ ಅವರ ಜಾಮೀನು ಅರ್ಜಿಯ ತೀರ್ಪನ್ನು ಸಿಟಿ ಸಿವಿಲ್ ಕೋರ್ಟ್ ನ.25ಕ್ಕೆ ಕಾಯ್ದಿರಿಸಿದೆ.

ಹುಚ್ಚ ವೆಂಕಟ್ ಅವರ ಜಾಮೀನು ಅರ್ಜಿ ಕುರಿತು ನವೆಂಬರ್ 25ಕ್ಕೆ ತೀರ್ಪು ನೀಡುವುದಾಗಿ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಹೇಳಿದರು. ಆ ನಿಟ್ಟಿನಲ್ಲಿ ಹುಚ್ಚ ವೆಂಕಟ್ ನ.25ರವರೆಗೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕಾಲಕಳೆಯಬೇಕಾಗಿದೆ.

ಖಾಸಗಿ ಟಿವಿ ಚಾನೆಲ್ ವೊಂದರ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಬಗ್ಗೆ ಕೇಳಲಾದ ಪ್ರಶ್ನೆಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ಅಲ್ಲದೇ ಈ ಬಗ್ಗೆ ಜ್ಞಾನ ಭಾರತಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಹುಚ್ಚ ವೆಂಕಟ್ ಅವರು ಇತ್ತೀಚೆಗೆ ಜ್ಞಾನಭಾರತಿ ಪೊಲೀಸರಿಗೆ ಶರಣಾಗಿದ್ದರು. ಬಳಿಕ ಅವರನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾಗ, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿತ್ತು. ಶನಿವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸೋಮವಾರಕ್ಕೆ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ನ.25ಕ್ಕೆ ಕಾಯ್ದಿರಿಸಿದೆ.
-ಉದಯವಾಣಿ

Write A Comment