ಕರ್ನಾಟಕ

ದಕ್ಷಿಣ ಭಾರತದ ಯುವ ನಟಿಯರ ಟಾಪ್‍ಲೆಸ್ ಆಕರ್ಷಣೆ

Pinterest LinkedIn Tumblr

vrvalaದಕ್ಷಿಣದ ಹೊಸ ತಲೆಮಾರಿನ ನಟಿಯರು ಸಿನಿಮಾ ಬದುಕಿನಾಚೆಗೆ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ಟಾಪ್ ಸೀಕ್ರೆಟ್ ವಿಷಯವನೇಲ್ಲ. ಇದು ಟಾಪ್‍ಲೆಸ್ ವಿಷಯ! ಇತ್ತೀಚೆಗೆ ತಮಿಳಿನ ನಟಿ ಕಸ್ತೂರಿ ತಮ್ಮ ಮಗುವಿನೊಂದಿಗೆ ಟಾಪ್‍ಲೆಸ್ ಆಗಿಸಿ ತೆಗೆಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿ ದೊಡ್ಡ ಸುದ್ದಿಯಾಯಿತು.

ಈಗ ಶೃತಿ ಮೆನನ್ ಸರದಿ. ಟಿ ವಿ ಆ್ಯಂಕರ್, ನಟಿ ಶೃತಿ ಮೆನನ್ ಮಲಯಾಳಂ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಫೇಮಸ್. ದಿ ಜರ್ನಿ ಎಂಬ ಸಲಿಂಗಪ್ರೇಮ ಕುರಿತ ಚಿತ್ರದ ಮೂಲಕ ವಿವಾದದಕ್ಕೆ ಕಾರಣವಾಗಿದ್ದರು. ತಮ್ಮ ಬೋಲ್ಡ್ ನಿಲುವಿನ ಮೂಲಕವೇ ಸುದ್ದಿಯಲ್ಲಿರುವ ಮೆನನ್ ಈಗ ಈಗ ಆಭರಣದ ಜಾಹೀರಾತೊಂದರ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ.

ಕೇರಳದ ಪ್ರಸಿದ್ಧ ಲೈಫ್ ಸ್ಟೈಲ್ ಮ್ಯಾಗಜೀನ್‍ಲ್ಲಿ ಪ್ರಕಟವಾಗಿರುವ ಆಭರಣಗಳ ಜಾಹೀರಾತು ವಿವಾದಕ್ಕೆ ಕಾರಣ. ಟಾಪ್ ಲೆಸ್ ಆಗಿ ಬರಿ ಆಭರಣಗಳಿಂದ ಅಲಂಕೃತವಾಗಿರುವ ಶೃತಿ ಮೆನನ್ ಅವರ ಚಿತ್ರಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದೇ ತಡ, ಆ ಚಿತ್ರಗಳು ಸೋಷಿಯಲ್ ನೆಟ್‍ವರ್ಕ್‍ನಲ್ಲಿ ಹರಿದಾಡಲಾರಂಭಿಸಿವೆ.

ಆಭರಣಗಳನ್ನು ನೀಡಿದಾಗ, ಸಿದ್ಧವಾಗಲು ಕೋಣೆಗೆ ತೆರಳುವ ವಧು ಕೇವಲ ಆಭರಣಗಳಿಂದಷ್ಟೇ ಅಲಂಕೃತಳಾಗಿ ಹೊರ ಬರುವ ಪರಿಕಲ್ಪನೆ ಇಟ್ಟುಕೊಂಡು ಸಿದ್ಧಪಡಿಸಲಾದ ಈ ಫೋಟೋ ಶೂಟ್ ಮಾಡೆಲಿಂಗ್ ವಲಯದಿಂದ ಅಪಾರ ಮೆಚ್ಚುಗೆ ಗಳಿಸಿಕೊಂಡಿತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಶೃತಿ ಮೆನನ್ ಈ ರೀತಿಯ ಫೋಟೋ ಶೂಟ್‍ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆದಿವೆ.

ಕೆಲವರು ಆಕೆಯ ಸೌಂದರ್ಯ, ಬೋಲ್ಡ್‍ನೆಸ್ ಬಗ್ಗೆ ಮಾತನಾಡಿದ್ದರೆ, ಇನ್ನು ಕೆಲವರು ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು ಎಂದು ಕೆಲವರು ಟೀಕಿಸಿದ್ದಾರೆ. ಇದಕ್ಕೆ ಶೃತಿ ಮೆನನ್ ಕೇರಳದ ಜನ ಪ್ರಜ್ಞಾವಂತರು, ಕಲಾಸ್ವಾದನೆಯ ಜ್ಞಾನವುಳ್ಳವರು ಎಂಬ ವಿಶ್ವಾಸವಿದೆ ಎಂದು ತಮ್ಮ ಫೇಸ್‍ಬುಕ್ ವಾಲ್‍ನಲ್ಲಿ ಉತ್ತರಿಸಿದ್ದಾರೆ. ಈ ದಕ್ಷಿಣ ಭಾರತದಲ್ಲಿ ಟಾಪ್‍ಲೆಸ್ ಆಗಿರುವುದೇ ಟಾಪ್ ವಿಷಯವಾಗಿ ಚರ್ಚೆಯಾಗುತ್ತಿದೆ!

Write A Comment