ಕರ್ನಾಟಕ

ಬೆಂಗಳೂರಲ್ಲಿ ಸಿಸಿಬಿ ಪೊಲೀಸರಿಂದ ಪಾತಕಿ ಛೋಟಾ ಶಕೀಲ್‌ ಸಹಚರನ ಬಂಧನ

Pinterest LinkedIn Tumblr

chotashakeel

ಬೆಂಗಳೂರು, ನ.18: ಭೂಗತ ಪಾತಕಿ ಛೋಟಾ ಶಕೀಲ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದುಷ್ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಿಸ್ಮಿಲ್ಲಾ ನಗರದಲ್ಲಿ ವಾಸವಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಛೋಟಾ ಶಕೀಲ್‌ನ ಸಹಚರ ಸೈಯದ್ ನಿಯಾಮತ್ (28) ಎಂಬಾತನನ್ನು ಬಂಧಿಸಿದ್ದಾರೆ. ಭೂಗತ ಪಾತಕಿ ಛೋಟಾ ಶಕೀಲ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆತನ ಸೂಚನೆ ಮೇರೆಗೆ ನಗರದ ರಾಜಕೀಯ ಮುಖಂಡರ ಕೊಲೆಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ಸಹ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದೆ.

ರೌಡಿ ಬ್ರಿಗೇಟ್ ಆಜಂಗೆ ಸುಪಾರಿ ನೀಡಿ ದುಷ್ಕೃತ್ಯ ಎಸಗುತ್ತಿದ್ದನಲ್ಲದೆ ಕೋಮು ಘರ್ಷಣೆ ಸೃಷ್ಟಿಸಲು ಸಹಚರರೊಂದಿಗೆ ಸೇರಿ ಒಳಸಂಚು ರೂಪಿಸಿದ್ದಾನೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿತ್ತು. ಆರೋಪಿ ಸೈಯದ್ ನಿಯಾಮತ್ ವಿರುದ್ಧ ಶಿವಾಜಿನಗರ, ತಿಲಕ್‌ನಗರ, ಪುಲಕೇಶಿನಗರ, ಸಂಪಿಗೆಹಳ್ಳಿ, ಭಾರತಿನಗರ ಠಾಣೆಗಳಲ್ಲಿ 8ಕ್ಕೂ ಕೊಲೆ, ದರೋಡೆ, ಶಸ್ತ್ರಾಸ್ತ್ರ ಸಂಗ್ರಹ ಸಂಬಂಧದಂತಹ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಂಧನದ ವೇಳೆ ಈತನ ಸಹಚರರೆನ್ನಲಾದ ಇನ್ನಿಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕೃತ್ಯದಲ್ಲಿ ಇವರಿಬ್ಬರುಗಳ ಪಾತ್ರದ ಬಗ್ಗೆ ತನಿಖೆ ಮುಂದುವರದಿದೆ. ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Write A Comment