ಮನೋರಂಜನೆ

ಸ್ಪಾಟ್‌ಫಿಕ್ಸಿಂಗ್‌: ಶ್ರೀಶಾಂತ್‌ ಸೇರಿ 35 ಜನರಿಗೆ ಹೈಕೋರ್ಟ್‌ ನೋಟಿಸ್‌

Pinterest LinkedIn Tumblr

shri1

ನವದೆಹಲಿ: ಕ್ರಿಕೆಟಿಗ ಶ್ರೀಶಾಂತ್‌ ಸೇರಿದಂತೆ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್‌ ಜಾರಿ ಮಾಡಿದೆ.

2013ರ 6ನೇ ಐಪಿಎಲ್‌ ಆವೃತ್ತಿಯಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಕ್ರಿಕೆಟಿಗರು ಮತ್ತು ಬುಕ್ಕಿಗಳು ಸೇರಿದಂತೆ ಒಟ್ಟು 35 ಜನರ ಭಾಗಿಯಾಗಿದ್ದರು.

ಕಳೆದ ಜುಲೈ 25 ರಂದು ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಭಾಗಿಯಾಗಿದ್ದವರಲ್ಲಿ ಕ್ರಿಕೆಟಿಗರಾದ ಶ್ರೀಶಾಂತ್‌, ಅಜಿತ್‌ ಚಾಂಡಿಲಾ, ಅಂಕಿತ್‌ ಚೌಹಾಣ್‌ ಸೇರಿದಂತೆ 31 ಜನರನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪೊಲೀಸರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ದೆಹಲಿ ಹೈಕೋರ್ಟ್‌ ಸ್ಪಾಟ್‌ಫಿಕ್ಸಿಂಗ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ 35 ಆರೋಪಿಗಳಿಗೂ ನೋಟಿಸ್‌ ಜಾರಿ ಮಾಡಿದೆ.

Write A Comment