ಕರ್ನಾಟಕ

ಶಾಸಕ ಡಾ.ಗುರುಪಾದಪ್ಪ ನಾಗಮಾರಪಳ್ಳಿ ನಿಧನ

Pinterest LinkedIn Tumblr

gurupadappa

ಬೆಂಗಳೂರು: ಹಿರಿಯ ಸಹಕಾರಿ ಧುರೀಣ, ಮಾಜಿ ಸಚಿವ ಬೀದರ್​ನ ಉತ್ತರ ಕ್ಷೇತ್ರದ ಕೆಜೆಪಿ ಶಾಸಕ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಬೆಂಗಳೂರಿನ ಆರ್ ಟಿ ನಗರ ನಿವಾಸದಲ್ಲಿ ಬೆಳಗಿನ ಜಾವ ಹೃದಯಾಘಾತಕ್ಕೆ ಒಳಗಾಗಿದ್ದು, ಕೂಡಲೇ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ 5 ಗಂಟೆ ಸಮಯದಲ್ಲಿ ವಿಧಿವಶರಾದರೆಂದು ಮೂಲಗಳು ತಿಳಿಸಿವೆ. ಬೀದರ್​ನ ಔರಾದ್ ತಾಲೂಕಿನ ನಾಗಮಾರಪಳ್ಳಿ ಗುರುಪಾದಪ್ಪ 6 ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿದ್ದರು.

1999ರಲ್ಲಿ ಔರಾದ್ ಕ್ಷೇತ್ರದ ವಿಧಾನಸಭೆ ಚುನಾವಣೆ ಹಾಗೂ 2009ರ ಬೀದರ್ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದರು. 1992ರಲ್ಲಿ ಕರ್ನಾಟಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದರು. 1985, 1989,1994, 2004ರಲ್ಲಿ ಔರಾದ್ ಶಾಸಕರಾಗಿ ಹಾಗೂ 2008 ಹಾಗೂ 2013ರಲ್ಲಿ ಬೀದರ್ ಶಾಸಕರಾಗಿ ಆಯ್ಕೆಯಾಗಿದ್ದರು. 1985ರಿಂದ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿದ್ದರು.

Write A Comment