ಕರ್ನಾಟಕ

ನಿತೀಶ್ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ದರಾಮಯ್ಯನವರಿಗೆ ಆಮಂತ್ರಣ

Pinterest LinkedIn Tumblr

sidduಬೆಂಗಳೂರು: ನವೆಂಬರ್ 20 ರಂದು ಬಿಹಾರ್ ಮುಖ್ಯಮಂತ್ರಿಯಾಗಿ 5 ನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿರುವ ಜೆಡಿ-ಯು ವರಿಷ್ಠ ನಿತೀಶ್ ಕುಮಾರ್  ಪದಗ್ರಹಣ ಮಾಡುತ್ತಿರುವ
ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸಿದ್ದಾರೆ.

ಸಿದ್ದರಾಮಯ್ಯನರಿಗೆ ದೂರವಾಣಿ ಕರೆ ಮಾಡಿದ್ದ ನಿತೀಶ್ ಕುಮಾರ್, ನವೆಂಬರ್ 20 ರಂದು  ಪಾಟ್ಣಾದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ತಾವು ಕಾರ್ಯಕ್ರಮದಲ್ಲಿ ಹಾಜರಿರುವುದಾಗಿ ಭರವಸೆ ನೀಡಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಅವರಿಗೂ ಕಳೆದ ವಾರವೇ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಲಾಗಿದೆ.

ಇನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಯುಪಿ ಸಿಎಂ ಅಖಿಲೇಶ್ ಯಾದವ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಮುಖಂಡರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 36 ಸಂಪುಟ ಸದಸ್ಯರೊಂದಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಶೇಷವೆಂದರೆ ಬಿಜೆಪಿ ವರಿಷ್ಠರಾದ ಅಡ್ವಾಣಿ ಹಾಗೂ ಶತ್ರುಘ್ನ ಸಿನ್ಹಾ ಅವರಿಗೆ ಮಾತ್ರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದ್ದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಬೇರೆ ಯಾವುದೇ ಬಿಜೆಪಿ ನಾಯಕರಿಗೆ ಆಹ್ವಾನಿಸಲಾಗಿಲ್ಲ.

ಬಿಜೆಪಿಯನ್ನು ವಿರೋಧಿಸುವ ಎಲ್ಲ ನಾಯಕರಿಗೂ ಆಮಂತ್ರಣ ನೀಡಲು ನಿರ್ಧರಿಸಿದ್ದೇವೆ ಎಂದು ಜೆಡಿ-ಯು ವಕ್ತಾರರಾದ ಅಜಯ್ ಅಲೋಕ್ ಈ ಮೊದಲೇ ಹೇಳಿಕೆ ನೀಡಿದ್ದರು. ಜೆಡಿ-ಯು ಅಧ್ಯಕ್ಷ ಶರದ್ ಯಾದವ್ ಮತ್ತು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್  ಸಮಾರಂಭದ ಮುಖ್ಯ ಅತಿಥಿಗಳಾಗಲಿದ್ದಾರೆ.

“ಭಾರತೀಯ ಜನತಾಪಕ್ಷದ ಸಿದ್ಧಾಂತಗಳಿಗೆ ವಿರೋಧವಾಗಿರುವ ಎಲ್ಲ ದೊಡ್ಡ ನಾಯಕರು ಒಂದಾಗಿ ಪ್ರಮಾಣವಚನ ಸಮಾರಂಭದಲ್ಲಿ ತಮ್ಮ ಏಕತೆಯನ್ನು ತೋರ್ಪಡಿಸಲಿದ್ದಾರೆ. ಇದು ದೇಶದಲ್ಲಿನ ವಿರೋಧಪಕ್ಷಗಳ ಏಕತೆಯ ಹೊಸ ಆರಂಭವಾಗಲಿದೆ”, ಎಂಜು ಜೆಡಿ-ಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿದ್ದಾರೆ.

Write A Comment