ಕರ್ನಾಟಕ

ಮಧುಮೇಹ ಜಾಗೃತಿ ಅಭಿಯಾನಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಚಾಲನೆ

Pinterest LinkedIn Tumblr

khader____fi___________________________ಬೆಂಗಳೂರು, ನ. 15: ವಿಶ್ವ ಮಧುಮೇಹ ದಿನದ ಅಂಗವಾಗಿ ಒಂದು ವಾರಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಣಿಪಾಲ್ ಆಸ್ಪತ್ರೆಯ ‘ದಿ ಬ್ಲ್ಯೂ ಮೆಸೆಂಜರ್’ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಮಧುಮೇಹ ಜೀವನಶೈಲಿಯ ರೋಗ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಎಚ್ಚರಿಕೆ ಮೂಡಿಸುವಷ್ಟು ಹೆಚ್ಚಿದೆ. ಅಲ್ಲದೆ, ಎಳೆಯ ವಯಸ್ಸಿನ ಮಕ್ಕಳಲ್ಲಿಯೂ ರೋಗ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಎಂದರು. ‘ಹೆಚ್ಚುವರಿಯಾಗಿ ಆಸ್ಪತ್ರೆ ಮೆಟ್ಟಿಲುಗಳನ್ನು ಬಳಸಿ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ಎಲ್ಲ ಉದ್ಯೋಗಿಗಳು ಮತ್ತು ಪಾಲುದಾರರಿಗೆ ಮೆಟ್ಟಿಲುಗಳನ್ನು ಬಳಸಲು ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು, ಅದೇರೀತಿ ಶಾಪರ್‌ಗಳು ಮತ್ತು ಮಾಲ್‌ಗಳಿಗೆ ಹೋಗುವವರಿಗೆ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದಕ್ಕೆ ಮೆಟ್ಟಿಲುಗಳನ್ನು ಬಳಸಲು ಪ್ರೋತ್ಸಾಹಿಸಲಾಗುವುದು ಎಂದರು.

ಮಣಿಪಾಲ್ ಆಸ್ಪತ್ರೆಯ ಡಾ.ಕಾರ್ತಿಕ್ ಪ್ರಭಾಕರ್ ಮಾತನಾಡಿ, ಮಧುಮೇಹ ದೀರ್ಘಕಾಲದ ರೋಗವಾಗಿದ್ದು, ಸದ್ದಿಲ್ಲದೇ ಕೊಲ್ಲುತ್ತದೆ. ಸಾಂಪ್ರದಾಯಿಕ ಜೀವನಶೈಲಿಯಿಂದ ಆಧುನಿಕ ಜೀವನಶೈಲಿಗೆ ಪರಿವರ್ತನೆಯಾಗುವಲ್ಲಿ ಕ್ಯಾಲೊರಿಗಳು ಮತ್ತು ಕೊಬ್ಬಿನಿಂದ ಸಮೃದ್ಧವಾದ ಆಹಾರಕ್ರಮದ ಜೊತೆಗೆ ಮಾನಸಿಕ ಒತ್ತಡ ಇದಕ್ಕೆ ಮುಖ್ಯ ಕಾರಣವಾಗಿದೆ. ವ್ಯಾಯಾಮದ ಕೊರತೆ, ಅಗತ್ಯಕಿಂತ ಹೆಚ್ಚಿನ ಆಹಾರ ಸೇವನೆ, ಧೂಮಪಾನ ಮತ್ತು ಬೊಜ್ಜು ಮೈಗಳು ಈ ತೊಂದರೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ. ರೋಗಗಳನ್ನು ತಡೆಯುವ ಕ್ರಮಗಳನ್ನು ಅಳವಡಿಸಿಕೊಳ್ಳುವ ಜಾಗೃತಿಯನ್ನು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಸುವಲ್ಲಿ ಮಣಿಪಾಲ್ ಆಸ್ಪತ್ರೆ ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ಹೇಳಿದರು.ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತ ಈಗಾಗಲೇ ಜಗತ್ತಿನ ಮಧುಮೇಹ ರಾಜಧಾನಿಯಾಗಿದೆ. 70 ದಶಲಕ್ಷ ಜನರು ಈ ರೋಗದಿಂದ ಬಳಲುವುದರೊಂದಿಗೆ ಮಧುಮೇಹ ಸ್ಫೋಟದ ಹಾದಿಯಲ್ಲಿ ಸಾಗಿದೆ. 2020ರ ವೇಳೆಗೆ 100 ದಶಲಕ್ಷ ಜನರು ಈ ರೋಗದ ಪರಿಣಾಮಕ್ಕೆ ಒಳಗಾಗುವರೆಂದು ಭವಿಷ್ಯ ನುಡಿಯಲಾಗಿದೆ ಎಂದರು.

Write A Comment