ಕರ್ನಾಟಕ

ರಾಜಧಾನಿಗೆ ಟ್ರಿಪಲ್ ಧಮಾಕಾ: ತ್ಯಾಜ್ಯದಿಂದ ವಿದ್ಯುತ್, ಗೊಬ್ಬರ ಉತ್ಪಾದಿಸುವ ಘಟಕ ಶೀಘ್ರ ಆರಂಭ

Pinterest LinkedIn Tumblr

Alponsus Stoelling Ambassador of Netherlands in india Newdelhi Meet Chief Minister Siddaramaiah in Bengaluru on Monday Mou Signed Between Karnataka and Neatherland also seen K J George Minister For Bangalore City Devlopment

ವಿದ್ಯುತ್, ಗೊಬ್ಬರ ಉತ್ಪಾದಿಸಬಲ್ಲ ಕಸ ಘಟಕ ಸ್ಥಾಪನೆ ಕುರಿತಂತೆ ಕರ್ನಾಟಕ ಸರ್ಕಾರ ಮತ್ತು ನೆದರ್ ಲ್ಯಾಂಡ್ ಬೆಂಗಳೂರಿನಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ ಸಂದರ್ಭ ಮುಖ್ಯಮಂತ್ರ
ಬೆಂಗಳೂರು: ಬೆಂಗಳೂರಿಗರಿಗೆ ಟ್ರಿಪಲ್ ಖುಷಿ… ಒಂದು ಕಸ ಸಮಸ್ಯೆ ನಿವಾರಣೆ, ಇನ್ನೊಂದು ಅದೇ ಕಸದಿಂದ ವಿದ್ಯುತ್ ಉತ್ಪಾದನೆ, ಮತ್ತೊಂದು ಸಂಸ್ಕರಿತ ಕಸದಿಂದ ಗೊಬ್ಬರ ಮತ್ತು ಇಟ್ಟಿಗೆಯಂಥ ವಸ್ತು ತಯಾರಿಕೆ.

ರಾಜಧಾನಿಯಲ್ಲಿ ನೆದರ್‍ಲ್ಯಾಂಡ್ ಮೂಲದ ಕಂಪನಿಯೊಂದು ಕಸ ನಿರ್ವಹಣಾ ಘಟಕ ತೆರೆಯಲಿದೆ. ಇದರಲ್ಲಿ ನಿತ್ಯ 600 ಮೆಟ್ರಿಕ್ ಟನ್ ಕಸ ಸಂಸ್ಕರಿಸಿ 7 ಮೆ. ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತದೆ. ಜೊತೆಗೆ ಜೈವಿಕ ಕಸದಿಂದ  ಗೊಬ್ಬರ ಹಾಗೂ ತ್ಯಾಜ್ಯದಿಂದ ನಿರ್ಮಾಣಕ್ಕೆ ಬಳಸುವ ಇಟ್ಟಿಗೆಯಂಥ ವಸ್ತುಗಳನ್ನೂ ತಯಾರಾಗಲಿದೆ. ನೆದರ್‍ಲ್ಯಾಂಡ್‍ನ `ವೇಸ್ಟ್ ಟು ವ್ಯಾಲ್ಯು’ ಕಂಪನಿ ಕರ್ನಾಟಕ ಸರ್ಕಾರದೊಂದಿಗೆ ಸೋಮವಾರ ಈ ಕುರಿತು ತಿಳಿವಳಿಕೆ ಪತ್ರಕ್ಕೆ  ಹಿ ಹಾಕಿದೆ. “ಅಗತ್ಯ ಅನುಮತಿ ಪ್ರಕ್ರಿಯೆ ನಂತರ ಆರು ತಿಂಗಳಲ್ಲಿ ಪ್ರಾಯೋಗಿಕ ಘಟಕ ಕಾರ್ಯರಂಭ ಮಾಡಲಿದೆ. ಯೋಜನೆಯ ಯಶಸ್ಸು ಆಧರಿಸಿ, ಮುಂದಿನದಿನಗಳಲ್ಲಿ ಇಂಥ ಇನ್ನಷ್ಟು ಘಟಕಗಳನ್ನು ನಗರದ ವಿವಿಧೆಡೆ ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ಸ್ಥಾಪಿಸುವ ಉದ್ದೇಶವಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಕಟಿಸಿದರು. ನೆದರ್‍ಲ್ಯಾಂಡ್‍ನ ಮೂಲಸೌಕರ್ಯ ಮತ್ತು ಪರಿಸರ ಸಚಿವಾಲಯ ಹಾಗೂ ರಾಜ್ಯದ ನಗರಾಭಿವೃದ್ಧಿ ಇಲಾಖೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದವು. ಈ ಸಂದರ್ಭದಲ್ಲಿ ಭಾರತದಲ್ಲಿ ನೆದರ್‍ಲ್ಯಾಂಡ್‍ನ ರಾಯಭಾರಿ ಫಾನ್ಸ್ ಸ್ಟೋಲಿಂಗಾ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ವೇಸ್ಟ್ ಟು ವ್ಯಾಲ್ಯು ಕಂಪನಿ  ತಿನಿ„ಗಳು, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಿ. ಸತ್ಯಮೂರ್ತಿ ಇದ್ದರು.

ಕಸದಿಂದ ವಿದ್ಯುತ್: “ತ್ಯಾಜ್ಯ ಸಂಸ್ಕರಣೆಯಿಂದ ವಿದ್ಯುತ್ ಉತ್ಪಾದಿಸಲಾಗುವುದು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಈ ವಿದ್ಯುತ್ ಖರೀದಿಸಲಿದೆ. ಯುನಿಟ್ ಖರೀದಿ ದರ ಇನ್ನೂ ನಿಗದಿಯಾಗಿಲ್ಲ. ಈ ಎಲ್ಲ  ಪ್ರಕ್ರಿಯೆಗಳಿಗೆ ಸಂಬಂಧಿಸಿದ ಒಡಂಬಡಿಕೆ ವಿವರಗಳನ್ನು ಶೀಫ್ರ ಇತ್ಯರ್ಥಪಡಿಸಿ ಪ್ರಕಟಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

Write A Comment