ಕರ್ನಾಟಕ

ಬಿಹಾರದಲ್ಲಿ ಜಾತ್ಯತೀತ ತತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ಜಯ ಸಿಕ್ಕಿದೆ : ಸಿಎಂ ಸಿದ್ದರಾಮಯ್ಯ

Pinterest LinkedIn Tumblr

siiiಬೆಂಗಳೂರು, ನ.8-ಬಿಹಾರ ವಿಧಾನಸಭೆ  ಚುನಾವಣೆಯಲ್ಲಿ ನಿತೀಶ್‌ಕುಮಾರ್ ನೇತೃತ್ವದ ಮೈತ್ರಿಕೂಟಕ್ಕೆ ಜಯ ಲಭಿಸಿರುವುದು ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತ ವಾದಕ್ಕೆ ಸಂದ ಗೆಲುವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಫಲಿತಾಂಶದ ಕುರಿತು ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಮುಕ್ತ ದೇಶ ಮಾಡಲು ಹೊರಟವರಿಗೆ  ಬಿಹಾರದಲ್ಲಿ ಜನ ಬಿಜೆಪಿ ಮುಕ್ತ ಮಾಡಿದ್ದಾರೆ ಎಂದರು. ಚುನಾವಣೆ ಸಂದರ್ಭದಲ್ಲಿ ಹಲವಾರು ಕೋಮುವಾದಿ ವಿಷಯಗಳನ್ನು ಚರ್ಚಿಸಲಾಗಿದ್ದು ಜನ ಅವನ್ನು  ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಸ್ಥಳೀಯವಾಗಿ ಯಾವ ನಾಯಕರನ್ನೂ ಬಿಂಬಿಸದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರನ್ನು ಮಾತ್ರ ಬಿಂಬಿಸಲಾಗಿತ್ತು. ಹಾಗಾಗಿ ಇದು ಮೋದಿ ಅವರ ವೈಯಕ್ತಿಕ ಸೋಲು ಎಂದು ಮುಖ್ಯಮಂತ್ರಿ ವಿಶ್ಲೇಷಿಸಿದರು.

ಲೋಕಸಭೆ ಚುನಾವಣೆಯ ನಂತರ ನರೇಂದ್ರ ಮೋದಿಯವರ ವರ್ಚಸ್ಸು ಕ್ಷೀಣಿಸುತ್ತಿದೆ. ರಾಜಧಾನಿ ದೆಹಲಿಯಲ್ಲಿ ಸೋಲು ಕಂಡಿದ್ದು ಇದೀಗ ಬಿಹಾರದಲ್ಲೂ ಸೋಲುಂಟಾಗಿದೆ. ಬಿಜೆಪಿಯವರು ಕೋಮುವಾದವನ್ನು ಮುಂದಿಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಜನತೆ ಒಗ್ಗಟ್ಟು ಮತ್ತು ಸೌಹಾರ್ದತೆಗೆ ಬೆಂಬಲ ನೀಡಿದ್ದಾರೆ ಎಂದರು. ಈ ಫಲಿತಾಂಶ ನಿರೀಕ್ಷಿತ ಜಾತ್ಯಾತೀತ ಶಕ್ತಿಗಳು ಬೇರುಬಿಟ್ಟಿವೆ. ಮೀಸಲಾತಿ ಪರಿಷ್ಕರಣೆ ಕುರಿತು  ಮೋಹನ್ ಭಾಗವತ್

Write A Comment