ಕರ್ನಾಟಕ

ಐಎಎಸ್ ಅಧಿಕಾರಿ ಫ್ಲ್ಯಾಟ್‌ನಲ್ಲಿ ಮಕ್ಕಳ ಬ್ಲೂಫಿಲ್ಮ್ ಸಿಡಿ ಪತ್ತೆ

Pinterest LinkedIn Tumblr

Kapil mohan

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಮನೆಯಲ್ಲಿ 20ಕ್ಕೂ ಹೆಚ್ಚು ಸಿಡಿಗಳು ಹಾಗೂ ಹಾರ್ಡ್ ಡಿಸ್ಕ್ ಪತ್ತೆಯಾಗಿದೆ.

ಸಿಐಡಿ ಅಧಿಕಾರಿಗಳ ದಾಳಿ ವೇಳೆ 20 ಸಿಡಿಗಳು ಹಾಗೂ ಹಾರ್ಡ್ ಡಿಸ್ಕ್ ಪತ್ತೆಯಾಗಿದ್ದು, ಅವುಗಳನ್ನು ಪರಿಶೀಲಿಸಿದಾಗ 7 ವಯಸ್ಕರ ಬ್ಲೂ ಫಿಲ್ಮ್ ಸಿಡಿಗಳು ಹಾಗೂ ಒಂದು ಮಕ್ಕಳ ಬ್ಲೂ ಫಿಲ್ಮ್ ಸಿಡಿ ಇರುವುದು ಪತ್ತೆಯಾಗಿದೆ.

ಬ್ಲೂ ಫಿಲ್ಮ್ ಸಿಡಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಪಿಲ್ ಮೋಹನ್ ವಿರುದ್ಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಮಕ್ಕಳ ಬ್ಲೂ ಫಿಲ್ಮ್ ಸಂಗ್ರಹದ ಬಗ್ಗೆ ಐಟಿ ಕಾಯ್ದೆ 67ಬಿ, ಮಕ್ಕಳ ಅಶ್ಲೀಲ ಚಿತ್ರ ಪ್ರದರ್ಶನ ತಡೆ ಹಾಗೂ ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ರವಾನೆ ತಡೆ ಕಾಯ್ದೆ ಅಡಿ ಕಪಿಲ್ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಈ ಸಂಬಂಧ ಲೋಕಾಯುಕ್ತ ಎಡಿಜಪಿ ಪ್ರೇಮ್ ಕುಮಾರ್ ಮೀನಾ ಅವರು ನಗರ ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್ ಅವರಿಗೆ ಪತ್ರ ಬರೆದಿದ್ದು, ಬ್ಲೂ ಫಿಲ್ಮ್ ಸಿಡಿಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಪೊಲೀಸ್ ಆಯುಕ್ತರು ಈ ಬಗ್ಗೆ ತನಿಖೆಗೆ ಉತ್ತರ ವಿಭಾಗ ಡಿಸಿಪಿಗೆ ಆದೇಶಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಸಂಬಂಧಿತ ಹಣ ಸಂಗ್ರಹಿಸಿದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 5ರಂದು ಯಶವಂತಪುರದಲ್ಲಿರುವ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿರುವ ಕಪಿಲ್ ಮೋಹನ್ ಪ್ಲ್ಯಾಟ್ ಮೇಲೆ ಸಿಐಡಿ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 2.45 ಕೆಜಿ ಚಿನ್ನ, 34.7 ಕ್ಯಾರೆಟ್ ವಜ್ರದ ಆಭರಣಗಳು ಹಾಗೂ 4 ಕೋಟಿ 37 ಲಕ್ಷ 50 ಸಾವಿರ ರುಪಾಯಿ ನಗದು ಜಪ್ತಿ ಮಾಡಿದ್ದರು. ಅಲ್ಲದೆ 28 ಡಿವಿಡಿಗಳು ಹಾಗೂ 1 ಹಾಡ್ ಡಿಸ್ಕ್ ಅನ್ನು ಸಿಐಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ನಂತರ ಪ್ರಕರಣ ಲೋಕಾಯುಕ್ತಕ್ಕೆ ಹಸ್ತಾಂತರವಾಗಿತ್ತು.

Write A Comment