ಕರ್ನಾಟಕ

ಕೊಪ್ಪಳ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದುವರೆದ ರೈತರ ಆತ್ಮಹತ್ಯೆ ಸರಣಿ

Pinterest LinkedIn Tumblr

farಕೊಪ್ಪಳ/ಚಿಕ್ಕಮಗಳೂರು, ಅ.22-ರಾಜ್ಯದಲ್ಲಿ ಅನ್ನದಾತನ ಆತ್ಮಹತ್ಯೆ ಸರಣಿ ಇಂದೂ ಮುಂದುವರೆದಿದ್ದು, ಈ ದಿನವೂ ಕೂಡ ಎರಡು ಪ್ರತ್ಯೇಕ ಸ್ಥಳಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಪ್ಪಳ ವರದಿ :
ಸಾಲಬಾಧೆ ತಾಳಲಾರದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ಹೈದರನಗರದ ನಿವಾಸಿ ರತ್ನಪ್ಪ ನಾಯಕ(50) ಮೃತ ರೈತನಾಗಿದ್ದಾನೆ. ಈತನು ಬೆಳೆದಿದ್ದ ಬೆಳೆಗೆ ಸೂಕ್ತ ಮಳೆಯಿಲ್ಲದ ಕಾರಣ ಬೆಳೆ ಕೈಕೊಟ್ಟ ಹಿನ್ನೆಲೆ, ತಾನು ಮಾಡಿದ್ದ6 ಲಕ್ಷ ರೂ. ಸಾಲವನ್ನು ತೀರಿಸಲಾಗದೆ ಮನನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ವರದಿ :
ಸಾಲಬಾಧೆ ತಾಳಲಾರದೆ ರೈತ ಮನನೊಂದು ತನ್ನ ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನರಸಿಂಹರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಗುಬ್ಬಿಗ ಗ್ರಾಮದ ಬೈಜು (40) ಮೃತ ರೈತನಾಗಿದ್ದಾನೆ. ಬೈಜುರವರು ತಮ್ಮ 25 ಗುಂಟೆ ಜಮೀನಿನಲ್ಲಿ ಶುಂಠಿ ಬೆಳೆಯನ್ನು ಬೆಳೆದಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ 1,25,000 ರೂ. ಹಾಗೂ ಸೋಷಿಯಲ್ ಸೊಸೈಟಿಯಿಂದ 75 ಸಾವಿರ ರೂ. ಮತ್ತು ಸಿತೂರು ಸಹಕಾರ ಸಂಘದಿಂದ 25 ಸಾವಿರ ರೂ.ಗಳು ಒಟ್ಟು 2,25,000 ರೂ.ಗಳನ್ನು ಸಾಲವಾಗಿ ಪಡೆದಿದ್ದರು. ಶುಂಠಿ ಬೆಳೆಯು ರೋಗ ಬಂದು ಹಾಳಾಗಿತ್ತು. ಸಂಘದವರು ಸಾಲ ಕಟ್ಟುವಂತೆ ನೋಟಿಸ್ ಕಳುಹಿಸಿದ್ದರು. ಸಾಲ ಕಟ್ಟಲು ಯಾವುದೇ ಆದಾಯದ ಮೂಲ ಇಲ್ಲದ ಕಾರಣ ಮೊನ್ನೆ ರಾತ್ರಿ ಶುಂಠಿ ಬೆಳೆದಿದ್ದ ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಮಧ್ಯಾಹ್ನ ಜಮೀನಿಗೆ ಬೈಜುರವರ ಅಣ್ಣ ಜೋಷಿ ಹೋದಾಗ ವಿಚಾರ ತಿಳಿದಿದೆ. ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment