ಕರ್ನಾಟಕ

ಬೆಣ್ಣಿ ಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ 15 ಜನರ ರಕ್ಷಣೆ

Pinterest LinkedIn Tumblr

hallaಹುಬ್ಬಳ್ಳಿ, ಅ.3-ಗುರುವಾರ ಮಧ್ಯರಾತ್ರಿ ಹಾಗೂ ಬೆಳಗಿನ ಜಾವ ಧಾರವಾಡ ಸೇರಿದಂತೆ ಕುಂದಗೋಳ ತಾಲೂಕಿನಲ್ಲಿ ಭಾರಿ ಮಳೆಯಾದ ಪರಿಣಾಮ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳಲ್ಲಿ ಪ್ರವಾಹ ಉಂಟಾಗಿದೆ. ಎಂದಿನಂತೆ ಬೆಳಿಗ್ಗೆ ತುಪ್ಪರಿಹಳ್ಳ ದಾಟಿ ಹೊಲಕ್ಕೆ ತೆರಳಿದ್ದ ತಾಲೂಕಿನ ಅಳಗವಾಡಿ ಗ್ರಾಮದ ಗಿರಿಜವ್ವ ಈರೇಶನವರ, ಲಕ್ಷಮವ್ವ ಗುಡಿಮನಿ, ಯಮನವ್ವ ತಳವಾರ, ನಿಂಗವ್ವ ತಳವಾರ, ಶಾರವ್ವ ಗುಡಿಮನಿ ಹಾಗೂ ಹನುಮಂತಪ್ಪ ಕೂಲಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನದ ನಂತರ ತುಪ್ಪರಿ ಹಳ್ಳದ ಹರಿವು ಜಾಸ್ತಿಯಾದ ಪರಿಣಾಮ ಭಯಭೀತರಾಗಿದ್ದಾರೆ.

ವಿಷಯ ತಿಳಿದ ಮನೆಯವರು ಈಜಿ ದಡದಲ್ಲಿರುವ ಹೊಲಕ್ಕೆ ತೆರಳಿ ಹಗ್ಗ ಬಿಟ್ಟು ಹೊಲದಲ್ಲಿದ್ದ ಐವರನ್ನು ಪಾರು ಮಾಡಿದ್ದಾರೆ.

ಇದೇ ರೀತಿ ಇದೇ ಹಳ್ಳದಲ್ಲಿ ಸಿಲುಕಿಹಾಕಿಕೊಂಡಿದ್ದ  ಶಿವರಡ್ಡಿ ಕನಕರಡ್ಡಿ, ಕಲ್ಲವ್ವ ತೆಂಗನಕೇರಿ, ಶಾಂತವ್ವ ತಡಹಾಳ, ಮಂಜವ್ವ ತೆಂಗನೇರಿ , ಮಂಜಮ್ಮ ಕನ್ನಮ್ಮನವರ, ಸರೋಜಾ ಲಕ್ಕುಂಡಿ ಹಾಗೂ ಯಲಪ್ಪ ಅಸುಂಡಿ ಸೇರಿದಂತೆ ಮೂವರನ್ನು ಪಾರು ಮಾಡಲಾಯಿತು. 7.30ರ ಸುಮಾರಿಗೆ ಮತ್ತೆ ಮೂವರು  ತುಪ್ಪರಿ ಹಳ್ಳದ ನಡುಗಡ್ಡೆಯಲ್ಲಿ ಸಿಲುಕಿದ್ದಾರೆಂಬ ಮಾಹಿತಿ ಬಂದಿದ್ದು ಇನ್ನು ಖಚಿತವಾಗಿಲ್ಲವಾದರೂ ತಹಶೀಲ್ದಾರ ನವೀನ್ ಹುಲ್ಲೂರ ಘಟನಾ ಸ್ಥಳಕ್ಕೆ ಮೋಟರ್ ಬೊಟ್ ತರಿಸಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಈ ಸಂಜೆಗೆ ತಿಳಿಸಿದರು. ಶಿರಕೋಳ ಗ್ರಾಮದ ಹತ್ತಿರವಿರುವ ತುಪ್ಪರಿಹಳ್ಳದಲ್ಲಿನ ನಡುಗಡ್ಡೆಯಲ್ಲಿ ಇಬ್ಬರು ಯುವಕರು ಸಿಲುಕಿದ್ದು ಅಲ್ಲಿಯೂ ಸಣ್ಣ ಮೊಟರ್ ಬೋಟ್ ಮೂಲಕ ಕಾರ್ಯಾಚರಣೆ ಮಾಡಿ ಯುವಕರನ್ನು ರಕ್ಷಿಸಿರುವುದಾಗಿ ತಹಶೀಲ್ದಾರರು ಮಾಹಿತಿ ನೀಡಿದ್ದಾರೆ.

Write A Comment