ಕರ್ನಾಟಕ

ಬೀದೀಲೂ ಇರಲು ಗೋವಾ ಪೊಲೀಸ್ನೋರು ಬಿಡ್ತಿಲ್ಲ…

Pinterest LinkedIn Tumblr

kannಕಾರವಾರ: ‘ಮನೆ ಕಳಕೊಂಡ್‌ ಬೀದೀಲಿ ಇರುವ ನಮ್ಮನ್ನ ಇಲ್ಲಿಂದ್ಲೂ ಖಾಲಿ ಮಾಡಿ ಅಂತಿದ್ದಾರ್ರೀ ಇಲ್ಲಿ ಪೋಲಿಸ್ನೋರು. ನಮ್ಮತ್ರ ನಯಾಪೈಸಾ ಇಲ್ರೀ. ಕೂಲಿ ಮಾಡಿದ್ರೇನೆ ನಮ್‌ ಜೀವ್ನಾ. ಈಗ್‌ ಎಲ್ಲಿ ಹೋಗೋದ್‌ ಅಂತ ದಿಕ್ಕೇ ತೋಚ್ತಾ ಇಲ್ಲಾ….’

ಇದು ಗೋವಾದ ಕಾಟೆ ಬೈನಾದ ಬೀದಿಯಲ್ಲಿ ಕುಳಿತ ನಿರಾಶ್ರಿತ ಸೂರಪ್ಪನ ಆತಂಕದ ನುಡಿಗಳಿವು. ‘ಗೋವಾ ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ, ನಮ್ಮ ಮನೆಗಳನ್ನು ನಿರ್ನಾಮ ಮಾಡಿದೆ. ಇತ್ತ ಕರ್ನಾಟಕ ಸರ್ಕಾರದ ನೆರವು ಕೂಡ ನಮಗೆ ಸಿಗ್ತಿಲ್ಲ’ ಎನ್ನುತ್ತಾರೆ ಅವರು. ಇದು ಒಬ್ಬಿಬ್ಬರ ಸಮಸ್ಯೆಯಲ್ಲ. 500ಕ್ಕೂ ಹೆಚ್ಚು ನಿರಾಶ್ರಿತ ಕನ್ನಡಿಗರ ಅಳಲು.

ಬೀದಿಯಲ್ಲೇ ಜೀವನ: ‘ಕಳೆದ 3 ದಿನಗ ಳಿಂದ ನಿರಾಶ್ರಿತ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ನೂರಾರು ಮಂದಿ ಬೀದಿಯಲ್ಲೇ ಕಾಲ ಕಳೆಯು ತ್ತಿದ್ದೇವೆ. ಪಾತ್ರೆ ಪಗಡೆಗಳನ್ನಿಟ್ಟುಕೊಂಡ ಕೆಲವರು ರಸ್ತೆ ಬದಿಯಲ್ಲೇ ಅಡುಗೆ ಮಾಡುತ್ತಿದ್ದಾರೆ.

ಇನ್ನುಳಿದವರು ಹಸಿವಿ ನಿಂದಲೇ ಕಾಲ ಕಳೆಯುವಂತಾಗಿದೆ. ಇನ್ನು ಸ್ನಾನ, ಶೌಚ ಎಲ್ಲ ಬಯಲಲ್ಲೇ ಮಾಡುವ ದುಃಸ್ಥಿತಿ ಎದುರಾಗಿದೆ’ ಎಂದು ಕಣ್ಣೀರು ಹಾಕುತ್ತಾರೆ ಮಸಣಮ್ಮ.

ಶಾಶ್ವತ ಪುನವರ್ಸತಿ: ‘ಸುಮಾರು 40–50 ವರ್ಷಗಳಿಂದ ಇಲ್ಲಿಯೇ ಜೀವನ ಸಾಗಿಸುತ್ತಿದ್ದೇವೆ. ಇದೀಗ ಪರ್ಯಾಯ ವ್ಯವಸ್ಥೆ ಇಲ್ಲದೇ ದಿಢೀರ್‌ ಒಕ್ಕಲೆಬ್ಬಿಸಿದರೆ ನಾವು ಎಲ್ಲಿ ಹೋಗೋದು ಎಂಬುದು ಜವರಪ್ಪನ ಒತ್ತಾಯ.

Write A Comment