ಕರ್ನಾಟಕ

‘ಜೂಲಿ 2’ ಚಿತ್ರದಲ್ಲಿ ಸಖತ್ ಗ್ಲಾಮರ್ ಪಾತ್ರದಲ್ಲಿ ಮಿಂಚಲಿದ್ದಾರೆ ಕನ್ನಡ ಮೂಲದ ನಟಿ ಲಕ್ಷ್ಮೀ ರೈ

Pinterest LinkedIn Tumblr

Lakshmi-Rai

ಚಿತ್ರರಂಗಕ್ಕೆ ಕಾಲಿಟ್ಟು ದಶಕ ಕಳೆದ ಮೇಲೆ ಬಾಲಿವುಡ್​ನಲ್ಲಿ ಕಾಣಿಸಿಕೊಂಡ ಕೀರ್ತಿ ಕರ್ನಾಟಕ ಮೂಲದ ನಟಿ ಲಕ್ಷ್ಮೀ ರೈ ಅವರದು! ಸೋನಾಕ್ಷಿ ಸಿನ್ಹಾ ನಟನೆಯ ‘ಅಕಿರ’ದಲ್ಲಿ ಪೋಷಕ ಪಾತ್ರ ಮಾಡಿದ್ದ ಅವರೀಗ ‘ಜೂಲಿ 2’ ಚಿತ್ರಕ್ಕೆ ನಾಯಕಿ. ನಿರ್ದೇಶಕ ದೀಪಕ್ ಶಿವದಾಸನಿ 2004ರಲ್ಲಿ ನೇಹಾ ಧೂಪಿಯಾ ಅವರನ್ನು ನಾಯಕಿಯನ್ನಾಗಿಸಿ ಮಾಡಿದ್ದ ‘ಜೂಲಿ’ ಚಿತ್ರದ ಮುಂದುವರಿದ ಭಾಗವಿದು. ಲಕ್ಷ್ಮೀ ರೈಗೆ ಇಲ್ಲಿ ಸಖತ್ ಗ್ಲಾಮರ್ ಪಾತ್ರವಂತೆ. ಬಿಕಿನಿ ದೃಶ್ಯಗಳು ಹೇರಳವಾಗಿದ್ದು, ಅದಕ್ಕೆಂದೇ ದೇಹವನ್ನು ಸಪೂರಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರಂತೆ ರೈ!

ಸಾಮಾನ್ಯ ಯುವತಿಯೊಬ್ಬಳು ರಾತ್ರಿಬೆಳಗಾಗುವುದರೊಳಗೆ ಸ್ಟಾರ್ ಆಗುವ ಕಥೆಯನ್ನಿಟ್ಟುಕೊಂಡು ‘ಜೂಲಿ 2’ ಮಾಡಲಾಗುತ್ತಿದೆಯಂತೆ. ‘ಹಿಂದಿನ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಈ ಚಿತ್ರ ಮೂಡಿಬರಲಿದೆ’ ಎನ್ನುತ್ತಾರೆ ನಿರ್ದೇಶಕ ದೀಪಕ್. ಮುಂಬೈ, ದೆಹಲಿ, ದುಬೈ, ಹೈದರಾಬಾದ್​ಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಚಿತ್ರತಂಡದ್ದು. ಅದೆಲ್ಲ ಸರಿ, ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿರುವ ಮತ್ತೊಂದು ಬ್ರೇಕಿಂಗ್ ನ್ಯೂಸ್ ಏನೆಂದರೆ, ‘ಪವರ್ ಸ್ಟಾರ್’ ಪವನ್ ಕಲ್ಯಾಣ್ ನಾಯಕತ್ವದ ‘ಸರ್ದಾರ್ ಗಬ್ಬರ್ ಸಿಂಗ್’ ಚಿತ್ರದ ಐಟಂ ಹಾಡಿನಲ್ಲೂ ಲಕ್ಷ್ಮೀ ಸ್ಟೆಪ್ಸ್ ಹಾಕಲಿದ್ದಾರೆ. ‘ಗಬ್ಬರ್ ಸಿಂಗ್’ನಲ್ಲಿದ್ದ ‘ಕೆವ್ವು ಕೇಕ..’ ಐಟಂ ಹಾಡಿನಲ್ಲಿ ಮಲೈಕಾ ಅರೋರಾ ಖಾನ್ ನಟಿಸಿದ್ದರು. ಇದೀಗ ಅದೇ ಹಾಡನ್ನು ಮರುಬಳಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ.. ಅದಕ್ಕಾಗಿ ಚಿತ್ರತಂಡ ಈ ಬಾರಿ ಲಕ್ಷ್ಮೀ ಮೊರೆ ಹೋಗಿದೆ.

ಇದೆಲ್ಲದರ ಹೊರತಾಗಿ ಇನ್ನೂ ಒಂದೆರಡು ಚಿತ್ರಗಳು ಅವರ ಕೈಯಲ್ಲಿವೆ. ಒಂದೆಡೆ ನಾಯಕಿಯಾಗಿ, ಮತ್ತೊಂದೆಡೆ ಐಟಂ ಗರ್ಲ್ ಆಗಿ ಲಕ್ಷ್ಮೀ ರೈ ಪುನಃ ಫಾಮರ್್​ನಲ್ಲಿದ್ದಾರೆ.

Write A Comment