ಬೆಂಗಳೂರು,ಸೆ.28: ದೇವರ ಹೆಸರಿನಲ್ಲಿ ಮನುಷ್ಯರನ್ನು ಗುಲಾಮರನ್ನಾಗಿಸುವುದು ಎಲ್ಲ ಧರ್ಮಗಳ ಉದ್ದೇಶ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಆರೋಪಿಸಿದರು.
ಭಾರತ ವಿದ್ಯಾರ್ಥಿ ಫೆಡರೇಶನ್ ನಗರದ ಸೆನೆಟ್ಹಾಲ್ನಲ್ಲಿಸೋಮವಾರ ಆಯೋಜಿಸಿದ್ದ ಭಗತ್ಸಿಂಗ್ರ 109ನೆ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರು ಎಂದರೆ ಬೆಳಕು ಎಂದರ್ಥ. ಆದರೆ, ಇವತ್ತು ಯಾವುದೇ ದೇವಾಲಯಗಳಿಗೆ ಹೋಗಿ ವಿದ್ಯುತ್ ದೀಪಗಳಿಂದ ದೇವರಿಗೇ ಬೆಳಕು ಬೇಕಾಗಿದೆ. ವಿದ್ಯುತ್ ದೀಪಗಳನ್ನು ಸ್ವಿಚ್ಆಫ್ ಮಾಡಿದರೆ ದೇವರು ಮತ್ತು ದೇವಾಲಯದಲ್ಲಿ ಕತ್ತಲು. ಇಂತಹ ಕತ್ತಲೆಯೆಡೆಗೆ ಹೋಗಿ ಸುಮ್ಮನೆ ಹಣ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳಿದರು.
ದೇಶದಲ್ಲಿ ಎಲ್ಲಿಯವರೆಗೆ ಜಾತಿ ಪದ್ಧತಿ ಇರುತ್ತದೆಯೋ ಅಲ್ಲಿಯವರೆಗೂ ದೇಶ ಮುಂದುವರಿಯಲು ಸಾಧ್ಯವಿಲ್ಲ. ತಾರತಮ್ಯವೆಂಬುದು ಹುಟ್ಟಿನಿಂದಲೆ ನಿರ್ಧಾರವಾಗುವ ಕಾಲದಲ್ಲಿ ನಾವಿದ್ದು, ಮಕ್ಕಳಲ್ಲಿ ಬುದ್ಧಿ ಬೆಳೆಯುವ ಮುಂಚೆಯೇ ದೇವರು, ಜಾತಿ ಎಂಬ ನಂಬಿಕೆಯನ್ನು ಬಿತ್ತುತ್ತಿದ್ದೇವೆ. ಮಕ್ಕಳು ಆ ನಂಬಿಕೆ ಗಳಿಂದ ಹೊರಬರಲಾರದ ಸ್ಥಿತಿಗೆ ಅವರನ್ನು ನಾವು ತಳ್ಳುತ್ತಿದ್ದೇವೆ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ವ್ಯವಸ್ಥೆಯ ಬದ ಲಾವಣೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಭಗತ್ ಸಿಂಗ್ ಅವರು 23ರ ಹರೆಯದಲ್ಲಿಯೆ ಗಾಂಧೀಜಿಯವರಿಂದ ಸಮಾನವಾದ ಜನಪ್ರಿಯತೆಯನ್ನು ಗಳಿಸಿದ್ದ ಮಹಾನ್ ದೇಶಪ್ರೇಮಿ. ವಿದ್ಯಾರ್ಥಿಗಳು ದೇಶಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳ ಆದರ್ಶ ಹಾಗೂ ತತ್ವಗಳನ್ನು ರೂಢಿಸಿಕೊಳ್ಳಬೇಕು ಹಾಗೂ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜನರನ್ನು ಒಡೆಯುವುದು ಮತ, ಜನರನ್ನು ಕೂಡಿಸುವುದು ಧರ್ಮ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು. ಕೆಲವರು ವಿವೇಕಾನಂದರನ್ನು ಹಿಂದೂ ಧರ್ಮದ ಪರ ಎಂದು ಹೇಳುತ್ತಾರೆ. ಆದರೆ, ವಿವೇಕಾನಂದರು ತಮ್ಮ ಪುಸ್ತಕದಲ್ಲಿ ‘ದೀನ ದಲಿತರ ಕುತ್ತಿಗೆಯನ್ನು ಹಿಂದೂ ಧರ್ಮ ತುಳಿಯು ವಂತೆ, ಬೇರೆ ಯಾವ ಧರ್ಮವು ತುಳಿಯುವುದಿಲ್ಲ’ ಎಂದು ಬರೆದಿದ್ದಾರೆ. ಹಿಂದೂ ಧರ್ಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರೂ ಈ ಮಟ್ಟಿಗೆ ಟೀಕಿಸಿರಲಿಲ್ಲ ಎಂದು ವಿವರಿಸಿದರು.
ದೇಶದ ಭೂಪಟವನ್ನು ಹಿಡಿದು ಪೂಜೆ ಮಾಡಿದ್ರೆ ದೇಶ ಭಕ್ತರಾಗೊಲ್ಲ, ಸಾಮಾಜಿಕವಾಗಿ ಹಿಂದುಳಿದ ಹಾಗೂ ಶೋಷಿತ ಸಮುದಾಯಗಳಿಗೆ ಆತ್ಮಸ್ಥೈರ್ಯ ಹಾಗೂ ಧೈರ್ಯವನ್ನು ತುಂಬು ವವನು ನಿಜವಾದ ದೇಶಭಕ್ತ ಎಂದ ಅವರು, ದುಡಿಯುವ ಮೂಲಕ ಮಾತ್ರ ದೇಶವನ್ನು ಕಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಎಸ್ಎಫ್ಐನ ಮಾಜಿ ರಾಜ್ಯ ಕಾರ್ಯ ದರ್ಶಿ ಜಿ.ಸಿ.ಬಯ್ಯರೆಡ್ಡಿ, ಪ್ರಾಧ್ಯಾಪಕ ಡಾ.ಕೆ.ಕೃಷ್ಣಪ್ಪ, ಸಮಾಜ ಕಲ್ಯಾಣಾಧಿಕಾರಿ ಎಚ್.ನರಸಿಂಹಯ್ಯ, ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ವೇಣುಗೋಪಾಲ್, ಪ್ರಾಧ್ಯಾಪಕ ಡಾ.ಸಿ.ಚಂದ್ರಪ್ಪ, ಕಾರ್ಮಿಕ ಮುಖಂಡ ಎನ್.ಪ್ರತಾಪ್ ಸಿಂಹ, ಸಹ ಪ್ರಾಧ್ಯಾಪಕ ಡಾ.ಲಕ್ಷ್ಮೀಪತಿ, ಎಸ್ಎಫ್ಐ ರಾಜ್ಯಾಧ್ಯಕ್ಷ ವಿ.ಅಂಬರೀಷ್ ಮತ್ತಿತರರು ಉಪಸ್ಥಿತರಿದ್ದರು.
ಬೌದ್ಧ ಧರ್ಮದಲ್ಲಿ ದೇವರಿಲ್ಲ
ಎಲ್ಲ ಧರ್ಮಗಳಲ್ಲಿ ದೇವರಿದ್ದಾನೆ. ಆದರೆ, ಬೌದ್ಧ ಧರ್ಮದಲ್ಲಿ ಮಾತ್ರ ದೇವರಿಲ್ಲ. ದೇವರನ್ನು ಒಪ್ಪಿಕೊಂಡ ಕೂಡಲೇ ಅಲ್ಲಿ ಪೂಜಾರಿ ಪ್ರತ್ಯಕ್ಷನಾಗಿ ಪ್ರಜಾಪ್ರಭುತ್ವದ ಮೇಲೆ ದೌರ್ಜನ್ಯ ನಡೆಸಲು ಆರಂಭಿಸುತ್ತಾರೆ. ಹೀಗಾಗಿ ಬುದ್ಧ ನಿರೀಶ್ವರವಾದಿ ಎಂದು ಭಗವಾನ್ ತಿಳಿಸಿದರು.
ನನ್ನ ಪುಸ್ತಕ ಓದಿ ಟೀಕೆ ಮಾಡಲಿ: ಪ್ರೊ.ಭಗವಾನ್
ಬೆಂಗಳೂರು, ಸೆ. 28: ನನ್ನ ವಿರುದ್ಧ ಟೀಕೆಗಳನ್ನು ಮಾಡು ವವರು ಮೊದಲು ನನ್ನ ಪುಸ್ತಕಗಳನ್ನು ಓದಿದ ನಂತರ ಮಾಡಲಿ ಎಂದು ವಿಚಾರವಾದಿ ಭಗವಾನ್ ತಿಳಿಸಿದ್ದಾರೆ.
ಸೆನೆಟ್ ಹಾಲ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಯಾವುದೇ ರೀತಿಯ ಬಹಿರಂಗ ಚರ್ಚೆಗೆ ನಾನು ಬರುವುದಿಲ್ಲ. ಪೇಜಾವರ ಸ್ವಾಮೀಜಿಯವರನ್ನು ಚರ್ಚೆಗೆ ಆಹ್ವಾನಿಸುವುದಿಲ್ಲ. ಯಾರೇ ನನ್ನ ಬಗ್ಗೆ ಟೀಕೆ ಮಾಡುವ ಮೊದಲು ನನ್ನ ಪುಸ್ತಕಗಳನ್ನು ಓದಿ, ಅವರ ಟೀಕೆಯನ್ನು ಪುಸ್ತಕ ರೂಪದಲ್ಲೇ ಹೊರತರಲಿ ಎಂದರು.
ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಕುರಿತು ಮಾತನಾಡಿ, ಸಾಮಾಜಿಕ ಜಾಲತಾಣದ ವಿರೋಧಕ್ಕೆ ನಾನು ತಲೆ ಕೆಡಿಸಿ ಕೊಳ್ಳುವುದಿಲ್ಲ. ಪ್ರಶಸ್ತಿಯ ವಿರುದ್ಧ ಕೋರ್ಟ್ಗೆ ಹೋಗುವವ ರು ಹೋಗಲಿ. ನಾನು ಪ್ರಶಸ್ತಿಯನ್ನು ಅತ್ಯಂತ ಖುಷಿಯಿಂದ ಸ್ವೀಕರಿಸುತ್ತೇನೆ ಎಂದು ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
ನಾನು ಯಾವುದೇ ಒಂದು ಸಮುದಾಯದ ವಿರುದ್ಧವಾ ಗಿ ಹೇಳಿಕೆಗಳನ್ನು ನೀಡುತ್ತಿಲ್ಲ. ನನ್ನ ಎಲ್ಲ ಹೇಳಿಕೆಗಳಿಗೆ ದಾಖ ಲೆಗಳಿವೆ. ದಾಖಲೆ ಇಲ್ಲದೆ ನಾನು ಏನನ್ನು ಹೇಳುವುದಿಲ್ಲ. ನನ್ನ ಪುಸ್ತಕದಲ್ಲಿ ದಾಖಲೆ ಸಮೇತವಾಗಿ ಎಲ್ಲವನ್ನು ಉಲ್ಲೇ ಖಿಸಿದ್ದೇನೆ. ಅವುಗಳನ್ನು ಓದಿ ಅವುಗಳು ಸುಳ್ಳಾದಲ್ಲಿ ನನ್ನ ವಿರುದ್ಧ ಟೀಕೆ ಮಾಡಲಿ ಎಂದು ಅವರು ಹೇಳಿದರು.