ಕರ್ನಾಟಕ

ಹಿಂದೂಗಳ ಭಾವನೆಗಳಿಗೆ ದಕ್ಕೆ ತಂದ ಆರೋಪ: ಭಗವಾನ್, ಚಂಪಾ ವಿರುದ್ಧ ಕೇಸ್

Pinterest LinkedIn Tumblr

champa_bhagawan ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಸಾಹಿತಿಗಳಾದ ಕೆ.ಎಸ್ ಭಗವಾನ್, ಚಂಪಾ ವಿರುದ್ಧ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ಈ ಇಬ್ಬರು ಸಾಹಿತಿಗಳು ರಾಮಾಯಣ ಮತ್ತು ಮಹಾಭಾರತ ಗ್ರಂಥಗಳ ಬಗ್ಗೆ ಟೀಕಿಸಿದ್ದರು, ಅಲ್ಲದೇ, ಭಗವದ್ಗೀತೆ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ತಾಲೂಕಿನ ಹೊಸಮೂಲೆ ನಿವಾಸಿ ಶ್ಯಾಮಸುದರ್ಶನ್ ಭಟ್ ಎಂಬುವವರು ದೂರು ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ 295/ಎ, 150/ಎ ಮತ್ತು 34ರಡಿಯಲ್ಲಿ ಮೊಕದ್ದಮೆ ದಾಖಲಾಗಿದೆ. ಸೆಪ್ಟೆಂಬರ್ 21ರಂದು ಭಗವಾನ್ ವಿರುದ್ಧ ಪ್ರಕರಣವನ್ನು ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ಆರೋಪಿ ನಂ.1 ಕೆಎಸ್ ಭಗವಾನ್ ಮತ್ತು ಆರೋಪಿ ನಂ.2  ಚಂಪಾ ಎಂದು ಹೆಸರಿಸಲಾಗಿದ್ದು, ಜೊತೆಗೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ನಂ.3 ಸೆಲ್ಲಿ ಎಂದು ದಾಖಲಾಗಿದೆ.

ಈ ಮೂವರ ಮೇಲೆ ಎಫ್ ಐಆರ್ ದಾಖಲಾಗಿದ್ದು, ಪ್ರಕರಣವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಇತ್ತೀಚೆಗಷ್ಟೇ ಗಾಂಧಿಭವನದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಈ ಇಬ್ಬರು ಸಾಹಿತಿಗಳು ಹಿಂದೂ ಧಾರ್ಮೀಕತೆ ಬಗ್ಗೆ ಟೀಕಿಸಿದ್ದರು. ರಾಮಾಯಣ ಓದುವವರೆಲ್ಲ ಭಯೋತ್ಪಾದಕರೂ ಎಂಬ ರೀತಿಯಲ್ಲಿ ಮಾತನಾಡಿದ್ದರು. ಹೀಗಾಗಿ ಹಿಂದೂ ಧಾರ್ಮೀಕತೆಗೆ ಧಕ್ಕೆ ತಂದಿರುವ ಈ ಸಾಹಿತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶಾಮ್ ಸುಂದರ್ ದೂರು ದಾಖಲಿಸಿದ್ದಾರೆ.

Write A Comment