ಕರ್ನಾಟಕ

ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ

Pinterest LinkedIn Tumblr

praಬೆಂಗಳೂರು: ಜೀವಮಾನದ ಸಾಹಿತ್ಯ ಸಾಧನೆಗಾಗಿ ಪ್ರೊ.ಕೆ.ಎಸ್.ಭಗವಾನ್‌, ಡಾ.ಬಿ.ಎನ್‌. ಸುಮಿತ್ರಾ ಬಾಯಿ, ಡಾ.ಮೊಗಳ್ಳಿ ಗಣೇಶ್‌, ಡಾ.ರಾಜೇಂದ್ರ ಚೆನ್ನಿ, ಡಾ.ರಹಮತ್‌ ತರೀಕೆರೆ ಅವರಿಗೆ 2013ನೇ ಸಾಲಿನ ಗೌರವ ಪ್ರಶಸ್ತಿ ನೀಡಲು ಕರ್ನಾಟಕ ಸಾಹಿತ್ಯ ಅಕಾಡೆಮಿ ನಿರ್ಧರಿಸಿದೆ.

ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅವರು ಶನಿವಾರ ಪ್ರಶಸ್ತಿಗಳನ್ನು ಪ್ರಕಟಿಸಿದರು.

‘ನವೆಂಬರ್‌ 7ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರತಿ ವರ್ಷ ಭಾರತೀಯ ಭಾಷೆಗಳ ಶ್ರೇಷ್ಠ ಲೇಖಕರೊಬ್ಬರನ್ನು ಅತಿಥಿಯನ್ನಾಗಿ ಆಹ್ವಾನಿಸುವುದು ವಾಡಿಕೆ. ಈ ಬಾರಿಯ ಅತಿಥಿ ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದು ಅವರು ತಿಳಿಸಿದರು.

2012ನೇ ಸಾಲಿನ ಪುಸ್ತಕ ಬಹುಮಾನ: ಕಾವ್ಯ: ಮುದುಕಿಯರಿಗಿದು ಕಾಲವಲ್ಲ (ಪ್ರತಿಭಾ ನಂದಕುಮಾರ್‌)

ಕಾದಂಬರಿ: ಅಜ್ಞಾತನೊಬ್ಬನ ಆತ್ಮಚರಿತ್ರೆ (ಕೃಷ್ಣಮೂರ್ತಿ ಹನೂರು) ಸಣ್ಣಕತೆ: ಹೆಗ್ಗುರುತು (ಕೆ.ಸತ್ಯನಾರಾಯಣ)

ನಾಟಕ: ಒಂಬತ್ತು ನಾಟಕಗಳು (ಬಿ.ಸುರೇಶ)

ಲಲಿತ ಪ್ರಬಂಧ: ಟಪಾಲು ಬಸ್ಸು (ಚಿಂತಾಮಣಿ ಕೊಡ್ಲೆಕೆರೆ)

ಪ್ರವಾಸ ಸಾಹಿತ್ಯ: ಮಾವೋವಾದಿಗಳ ಹಿಂದೂರಾಷ್ಟ್ರ ನೇಪಾಳ (ಶ್ರೀನಿವಾಸ ಜೋಕಟ್ಟೆ)

ಜೀವನ ಚರಿತ್ರೆ/ ಆತ್ಮಕತೆ: ಗೊಂದಲಿಗ್ಯಾ (ಎ.ಎಂ.ಮದರಿ)

ಸಾಹಿತ್ಯ ವಿಮರ್ಶೆ: ನಿಜಗುಣ (ಎಸ್‌.ಆರ್‌.ವಿಜಯಶಂಕರ್‌)

ಗ್ರಂಥ ಸಂಪಾದನೆ: ಮಹಾಲಿಂಗ ರಂಗ ಕವಿಯ ಅನುಭವಾಮೃತ ಕಾವ್ಯ (ಜಿ.ಅಶ್ವತ್ಥ ನಾರಾಯಣ)

ಮಕ್ಕಳ ಸಾಹಿತ್ಯ: ಚಿಣ್ಣರ ಲೋಕದ ಬಣ್ಣದ ಹಾಡು (ಸಿ.ಎಂ.ಗೋವಿಂದ ರೆಡ್ಡಿ)

ವಿಜ್ಞಾನ ಸಾಹಿತ್ಯ: ಹಚ್ಚೇವು ಹಸಿರಿನ ಹಣತೆ  (ಪಿ.ಸತ್ಯನಾರಾಯಣ ಭಟ್‌)

ಮಾನವಿಕ: ಭಾರತೀಯ ದರ್ಶನಗಳು ಮತ್ತು ಭಾಷೆ (ಎಂ.ಎ.ಹೆಗಡೆ) ಸಂಶೋಧನೆ: ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ (ಷ.ಶೆಟ್ಟರ್)

ಅನುವಾದ ಸಾಹಿತ್ಯ (ಸೃಜನಶೀಲ): ಒಂದು ಜೀವನ ಸಾಲದು (ಮೂಲ: ಕುಲದೀಪ್‌ ನಯ್ಯರ್‌ ಆತ್ಮಕತೆ; ಅನುವಾದ: ಆರ್‌.ಪೂರ್ಣಿಮಾ)

ಅನುವಾದ (ಸೃಜನೇತರ): ನಾಗರೀಕತೆಯ ಕತೆ– ಪುನರುಜ್ಜೀವನ (ಸಂ–5) (ಮೂಲ: ವಿಲ್‌ ಡ್ಯುರಾಂಟ್‌; ಅನುವಾದ ಈಶ್ವರಚಂದ್ರ)

ಸಂಕೀರ್ಣ: ಕಣ್ನೆಲೆ – ದೃಶ್ಯಕಲೆ ಕುರಿತ ಬರಹಗಳು (ರವಿಕುಮಾರ್‌ ಕಾಶಿ) ಲೇಖಕರ ಮೊದಲ ಕೃತಿ: ರಸ್ತೆ ನಕ್ಷತ್ರ (ಟಿ.ಕೆ.ದಯಾನಂದ)

2012ರ ದತ್ತಿನಿಧಿ ಬಹುಮಾನ: ಕಾದಂಬರಿ (ಚದುರಂಗ ದತ್ತಿ ನಿಧಿ ಬಹುಮಾನ): ಮಂಗನ ಬ್ಯಾಟೆ– ಮಲೆನಾಡ ಪರಿಸರ ಕಥನ
(ಕಲ್ಕುಳಿ ವಿಠಲ ಹೆಗ್ಡೆ)

ಜೀವನ ಚರಿತ್ರೆ/ ಆತ್ಮಕತೆ (ಸಿಂಪಿ ಲಿಂಗಣ್ಣ ದತ್ತಿನಿಧಿ): ನಾನು ಭಾರ್ಗವಿ (ಭಾರ್ಗವಿ ನಾರಾಯಣ್‌)

ಸಾಹಿತ್ಯ ವಿಮರ್ಶೆ (ಪಿ.ಶ್ರೀನಿವಾಸ ರಾವ್‌ ದತ್ತಿನಿಧಿ): ನೀಲನಕ್ಷೆ– ಕನ್ನಡ ವಿಮರ್ಶೆ: ಇಟ್ಟ ಹೆಜ್ಜೆ ತೊಟ್ಟ ರೂಪ (ಕೆ.ಕೇಶವ ಶರ್ಮ)

ಅನುವಾದ(ಸೃಜನಶೀಲ)(ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ): ಎ.ಕೆ.ರಾಮಾನುಜನ್‌ ಆಯ್ದ
ಪ್ರಬಂಧಗಳು (ಒ.ಎಲ್‌. ನಾಗಭೂಷಣಸ್ವಾಮಿ) ಲೇಖಕರ ಮೊದಲ ಕೃತಿ (ಮಧುರಚೆನ್ನ ದತ್ತಿನಿಧಿ): ಕೈಗೆಟಕುವ ಕೊಂಬೆ
(ಸ್ಮಿತಾ ಮಾಕಳ್ಳಿ)

ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ (ಅಮೆರಿ ಕನ್ನಡ ದತ್ತಿ ): Senteineils of glory ( ಸಿ.ಆರ್‌.ಸತ್ಯ) ಮೂಲಕೃತಿ ಅಳಿವಿಲ್ಲದ ಸ್ಥಾವರ (ಸಿ.ಆರ್‌.ಸತ್ಯ)

Write A Comment