ಕರ್ನಾಟಕ

ದಸರಾ ಆನೆ ಮಾವುತರ ಮಕ್ಕಳಿಗೆ ಟೆಂಟ್ ಶಾಲೆ

Pinterest LinkedIn Tumblr

3shaleಮೈಸೂರು, ಸೆ.19: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಗರ ಕೇಂದ್ರ ಗ್ರಂಥಾಲಯದಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೊದಲ ಹಂತದ ಆನೆಗಳ ತಂಡದೊಂದಿಗೆ ಆಗಮಿಸಿರುವ ಮಾವುತ ಹಾಗೂ ಕಾವಾಡಿಗಳ ಮಕ್ಕಳಿಗಾಗಿ ಅರಮನೆ ಆರಣದಲ್ಲಿ ಆರಂಭಿಸುವ ಟೆಂಟ್ ಶಾಲೆ ಮತ್ತು ಗ್ರಂಥಾಲಯವನ್ನು ಶನಿವಾರ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಕೆ.ಸೂಮಶೇಖರ್ ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಶಾಸಕರು, ಮಾವುತರು ಹಾಗೂ ಅವರ ಕುಟುಂಬದವರಿಗೆ ಮಾತ್ರ ವಲ್ಲದೆ ಹೆಚ್ಚಾಗಿ ಅವರ ಮಕ್ಕಳಿಗೆ ಪುಸ್ತಕ ಪ್ರಪಂಚ ಪರಿಚಯ ಮಾಡಿಸುವುದು ಟೆಂಟ್ ಶಾಲೆ ಹಾಗೂ ಗ್ರಂಥಾಲಯದ ಮುಖ್ಯ ಉದ್ದೇಶವಾಗಿದೆ. ಮೊದಲ ಹಂತದ ಆನೆಗಳ ತಂಡದೊಂದಿಗೆ 12 ಮಾವುತ ಹಾಗೂ ಕಾವಾಡಿಗಳ ಕುಟುಂಬದ ಗಳ ಜೊತೆ 14 ಮಕ್ಕಳು ಆಗಮಿಸಿದ್ದಾರೆ. ಟೆಂಟ್ ಶಾಲೆಯಲ್ಲಿ ಮಕ್ಕಳಿಗೆ ಪಾಠ ಪ್ರವಚನ ಮಾಡಲು ರಾಜ್ಯ ಶಿಕ್ಷಕಿ ಪ್ರಶಸ್ತಿ ವಿಜೇತ ಶಿಕ್ಷಕಿ ನೂರ್ ಫಾತಿಮಾ ಮತ್ತು ಸುಬ್ಬಲಕ್ಷ್ಮೀ ಅವರನ್ನು ನೇಮಿಸಲಾಗಿದೆ. ದಸರಾ ಮಹೋತ್ಸವ ಮುಗಿಯು ವವರೆಗೆ ಟೆಂಟ್ ಶಾಲೆ ಹಾಗೂ ಗ್ರಂಥಾಲಯ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು. ಟೆಂಟ್ ಗ್ರಂಥಾಲಯದಲ್ಲಿ ಮಾವುತ, ಕಾವಾಡಿಗಳು ಹಾಗೂ ಅವರ ಮಕ್ಕಳಲ್ಲಿ ಓದುವ ಹವ್ಯಾಸ ವನ್ನು ಬೆಳೆಸುವುದು, ಪುಸ್ತಕಗಳ ಪರಿಚಯ, ಬಳಕೆ, ಸಂಗ್ರಹಣೆ, ಪುಸ್ತಕಗಳನ್ನು ಗುರುತಿಸುವುದು ಮತ್ತು ಹಲವಾರು ವಿಷಯಗಳಲ್ಲಿ ಮಾಹಿತಿ ನೀಡಲಾಗುವುದು. ಟೆಂಟ್ ಶಾಲೆ ಮತ್ತು ಗ್ರಂಥಾಲಯ ಬೆಳಗ್ಗೆ 9:30ರಿಂದ ಮಧ್ಯಾಹ್ನ 2:30 ರವರೆಗೆ ಪ್ರತಿದಿನ ನಡೆಯಲಿದೆ ಎಂದು ಶಾಸಕರು ತಿಳಿಸಿದರು.

ಜಿಪಂ ಅಧ್ಯಕ್ಷೆ ಡಾ. ಬಿ.ಪುಷ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಕಮಲಾ, ಡಾ.ವಿ. ಕರಿಕಾಳನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿ ರ್ದೇಶಕ ಎಚ್.ಆರ್.ಬಸಪ್ಪ ಹಾಗೂ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಈ ಸಂದರ್ಭದಲ್ಲಿದ್ದರು.

Write A Comment