ಕರ್ನಾಟಕ

ಶೀಘ್ರದಲ್ಲೇ ಲೋಡ್ ಶೆಡ್ಡಿಂಗ್ ಅವಧಿ ಕಡಿತ: ಡಿ.ಕೆ. ಶಿವಕುಮಾರ್

Pinterest LinkedIn Tumblr

D.K.Shivakumarಬೆಂಗಳೂರು, ಸೆ.10: ಕೇಂದ್ರದ ಗ್ರೀಡ್‌ನಿಂದ 200 ಮೆ.ವ್ಯಾ ಹೆಚ್ಚುವರಿ ವಿದ್ಯುತ್ ಲಭ್ಯವಾಗುವ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಲೋಡ್‌ಶೆಡ್ಡಿಂಗ್ ಅವಧಿ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸರಕಾರ ಬುಧವಾರದಿಂದ ಪ್ರತಿದಿನ ರಾತ್ರಿ 10ಗಂಟೆಯಿಂದ ಬೆಳಗ್ಗೆ 4 ಗಂಟೆಯ ಮಧ್ಯೆ ವಿದ್ಯುತ್ ನೀಡುತ್ತಿದೆ. ಹೀಗಾಗಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರದ ಮೊದಲ ಘಟಕದಿಂದ ಸೆ.12ರ ವೇಳೆಗೆ 500 ಮೆ.ವ್ಯಾ ಹಾಗೂ ಸೆ.17 ರ ವೇಳೆಗೆ 2ನೆ ಘಟಕದಿಂದ ಇನ್ನು 500 ಮೆ.ವ್ಯಾ ವಿದ್ಯುತ್ ದೊರೆಯಲಿದೆ ಎಂದ ಶಿವಕುಮಾರ್, ಸೆ.22ರ ವೇಳೆಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ಪ್ರಮಾಣ ತಗ್ಗಿಸಲಾಗುವುದು ಎಂದರು. ರಾಜ್ಯದಲ್ಲಿ ಪ್ರತಿನಿತ್ಯ 9 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದು, ಜಲಾಶಯಗಳಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಉತ್ಪಾದನೆ ಕುಂಠಿತವಾಗಿದೆ ಎಂದ ಅವರು, ಕೇಂದ್ರ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಪೂರೈಕೆ ಕಡಿಮೆಯಾಗಿದೆ. ಆದರೆ, 8,700 ಮೆ.ವ್ಯಾ ಬೇಡಿಕೆಯಿದ್ದು, ಎಲ್ಲ ಮೂಲಗಳಿಂದ 5,300 ಮೆ.ವ್ಯಾ ವಿದ್ಯುತ್ ಲಭ್ಯವಿದೆ ಎಂದರು.
ಇತ್ತೀಚೆಗೆ ಮಳೆ ಸುರಿದಿದ್ದು, ಕೆಲ ಜಲಾಶಯಗಳಿಗೆ ನೀರು ಬಂದಿವೆ. ಹೀಗಾಗಿ ಸೆ.22ರ ವೇಳೆ ವಿದ್ಯುತ್ ಪರಿಸ್ಥಿತಿ ಕೊಂಚ ಸುಧಾರಿಸಲಿದೆ. ಆದರೆ, ಸ್ಥಳೀಯ ಸಂಸ್ಥೆಗಳ 3 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಸೇರಿ 16 ಸಾವಿರ ಕೋಟಿ ರೂ.ಬಾಕಿ ಬರಬೇಕಿದ್ದು, ಕೆಪಿಟಿಸಿಎಲ್ ನಷ್ಟದ ಸುಳಿಗೆ ಸಿಲುಕಿದೆ.
ಆದರೂ, ಇಂಧನ ಇಲಾಖೆಯನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದು, ಈ ಹಿಂದೆ 2.73 ಲಕ್ಷ ಇದ್ದ ಟಾನ್ಸ್‌ಫಾರ್ಮರ್‌ಗಳ ಸಂಖ್ಯೆ ನಾವು ಅಧಿಕಾರಕ್ಕೆ ಬಂದ ಬಳಿಕ 5.56 ಲಕ್ಷಕ್ಕೇರಿದೆ. ಜಲ ವಿದ್ಯುತ್ ಘಟಕಗಳಿಂದ ಮತ್ತಷ್ಟು ವಿದ್ಯುತ್ ಪಡೆಯಬಹುದು. ಆದರೆ, ಸಂಕಷ್ಟ ಕಾಲಕ್ಕಿರಲಿ ಎಂದು ನೀರು ಸಂಗ್ರಹವನ್ನು ಹೊಂದಾಣಿಕೆ ಮಾಡಿ ಕೊಳ್ಳುತ್ತಿದ್ದೇವೆ ಎಂದರು.

ಖಾಸಗಿಗೆ ನಿರ್ಬಂಧ
ರಾಜ್ಯದಲ್ಲಿ ಖಾಸಗಿ ಕಂಪೆನಿಗಳು ಉತ್ಪಾದಿಸುವ ವಿದ್ಯುತ್ ಅನ್ನು ಹೊರ ರಾಜ್ಯಗಳಿಗೆ ಪೂರೈಕೆ ಮಾಡದಂತೆ ನಿರ್ಬಂಧ ಹೇರಲಾಗುವುದು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಜೊತೆ ಸಮಾಲೋಚನೆ ನಡೆಸಿದ್ದು, ವಿದ್ಯುತ್ ಕ್ಷಾಮದ ಹಿನ್ನೆಲೆಯಲ್ಲಿ ಸರಕಾರಕ್ಕೆ ಪೂರೈಕೆ ಮಾಡುವಂತೆ
11 ‘ಎ’ ಕಾಯ್ದೆಯನ್ನು ಜಾರಿಗೆ ಉದ್ದೇಶಿಸಲಾಗಿದೆ.
ಡಿ.ಕೆ.ಶಿವಕುಮಾರ್, ಇಂಧನ ಸಚಿವ

Write A Comment