ಬೆಂಗಳೂರು, ಸೆ.8: ಬೆಂಗಳೂರಿನಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದು ಅನಿವಾರ್ಯ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಘೋಷಿಸಿ ವಾರವೇ ಕಳೆದಿದೆ ಹಾಗಾಗಿ ಬೆಸ್ಕಾಂನಿಂದ ಲೋಡ್ ಶೆಡ್ಡಿಂಗ್‌ನ್ನು ಯಾವ ಸಮಯದಲ್ಲಿ ಮಾಡಲಾಗುವುದು ಎಂಬುದನ್ನು ಪ್ರಕಟಿಸಲಾಗಿದೆ.
ನಗರಕ್ಕೆ ಈಗ 700 ಫೀಡರ್‌ಗಳಿಂದ ವಿದ್ಯುತ್ ಸರಬರಾಜು ಆಗುತ್ತಿದ್ದು, ಬೆಸ್ಕಾಂ ಯಾವ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂಬುದರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಹಿನ್ನೆಯಲ್ಲಿ ಬೆಂಗಳೂರಿನಲ್ಲಿ 829 ಬಡಾವಣೆಯನ್ನು ಬೆಸ್ಕಾಂ ಗುರುತಿಸಿದೆ.
829 ಬಡಾವಣೆಗಳನ್ನು 5 ಬ್ಯಾಚ್‌ಗಳಾಗಿ ವಿಂಗಡನೆ ಮಾಡಲಾಗಿದ್ದು, ಬಿ1 ನಿಂದ ಬಿ5 ರವರೆಗೂ ಗುರುತಿಸಿದೆ. ಪ್ರತಿ `ಬ್ಯಾಚ್` ನಲ್ಲೂ ದಿನಕ್ಕೆ 3 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇನ್ನು 120 ಫೀಡರ್‌ಗಳಿಂದ ಏಕ ಕಾಲದಲ್ಲಿ ಕರೆಂಟ್ ತೆಗೆಯುವುದರಿಂದ ಒಂದೇ ಸಮಯದಲ್ಲಿ 15 ಗಂಟೆಗಳು ಸರಬರಾಜು ಆಗುವ ವಿದ್ಯುತ್ ಅನ್ನು ಉಳಿಸುವುದು ಬೆಸ್ಕಾಂ ಲೆಕ್ಕಾಚಾರವಾಗಿದೆ.
ವೇಳಾಪಟ್ಟಿ ಇಂತಿದೆ
ಬೆಳಿಗ್ಗೆ ಮಧ್ಯಾಹ್ನ ಸಂಜೆ
ಬಿ-1 6 ಗಂಟೆ 7- 11 ಗಂಟೆ – 12 ಗಂಟೆ 4- 5 ಗಂಟೆ
ಬಿ-2 7-8 12-1 5-6
ಬಿ-3 8-9 1-2 6-7
ಬಿ-4 9-10 2-3 7-8
ಬಿ-5 10-11 3-4 8-9
ಜನಜೀವನಕ್ಕೆ ಗರ
ಸುದೀರ್ಘ ಅವಧಿಯ ಲೋಡ್ ಶೆಡ್ಡಿಂಗ್ ಪರಿಣಾಮವಾಗಿ ಬೆಂಗಳೂರಿನ ಜನಜೀವನಕ್ಕೆ ಗರ ಬಡಿದಂತಾಗಿದೆ.
ವಿದ್ಯಾರ್ಥಿಗಳೂ ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನ ವಿದ್ಯುತ್ ತಾಪವನ್ನು ಎದುರಿಸಬೇಕಿದೆ. ಇದರ ಜತೆಗೆ ಪರ್ಯಾಯ ವಿದ್ಯುತ್ ಮೂಲಗಳ ಮೇಲೆ ಅವಲಂಬನೆ ಹೆಚ್ಚಾಗುತ್ತಿದೆ.
ಬೃಹತ್ ಕಟ್ಟಡಗಳಲ್ಲಿ ಲಿಫ್ಟ್ ಬಳಕೆ ಗಂಡಾಂತರ ಪರಿಸ್ಥಿತಿಯನ್ನು ಆಹ್ವಾನಿಸಿಕೊಂಡಂತಾಗಿದೆ. ಹೊಟೇಲ್‌ಗಳ ಊಟ, ತಿಂಡಿ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಮಳೆಗಾಲದಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ನೀರು ಬರದಿದ್ದರೆ ಮುಂದಿನ ಬೇಸಿಗೆಯಲ್ಲಿ ಭೀಕರ ಸ್ಥಿತಿ ಆವರಿಸಲಿದೆ.
