ಕರ್ನಾಟಕ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 2 ಮರಿಗಳಿಗೆ ಜನ್ಮ ನೀಡಿದ ಸಿಂಹಿಣಿ

Pinterest LinkedIn Tumblr

lion

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಹೇಮಾ (11) ಎನ್ನುವ ಸಿಂಹಣಿ ಶುಕ್ರವಾರ ಎರಡು ಮರಿಗಳಿಗೆ ಜನ್ಮನೀಡಿದೆ. ನೂತನ ಅತಿಥಿಗಳಿಂದ ಉದ್ಯಾನದಲ್ಲಿನ ಸಿಂಹದ ಸಂಖ್ಯೆ 22ಕ್ಕೆ ಏರಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ರಂಗೇಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉದ್ಯಾನದ ಹೇಮಾ ಮತ್ತು ರಾಮ ಎಂಬ ಜೋಡಿಗೆ ಜನಿಸಿರುವ ಸಿಂಹದ ಮರಿಗಳು ಆರೋಗ್ಯವಾಗಿವೆ. ಉದ್ಯಾನದ ವೈದ್ಯರು ಜತನದಿಂದ ತಾಯಿ ಹಾಗೂ ಮರಿಗಳನ್ನು ಆರೈಕೆ ಮಾಡುತ್ತಿದ್ದಾರೆ.

ಸಂತಸದ ಸುದ್ದಿ ಎಂದರೆ ಶುಕ್ರವಾರವೇ ಉದ್ಯಾನದ ಕಾಡು ಬೆಕ್ಕೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಶನಿವಾರ ಉದ್ಯಾನದ ನವಿಲು ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು ಎಲ್ಲವೂ ಆರೋಗ್ಯವಾಗಿವೆ ಎಂದು ತಿಳಿಸಿದ್ದಾರೆ.

Write A Comment