ಕರ್ನಾಟಕ

ಮುರುಘಾ ಶರಣರಿಗೆ ಪೆರಿಯಾರ್ ಪ್ರಶಸ್ತಿ

Pinterest LinkedIn Tumblr

pvec229rjMurugha-05ಚಿತ್ರದುರ್ಗ, ಸೆ. 5: ವಿಚಾರ ವಾದಿಗಳ ವೇದಿಕೆ- ಕರ್ನಾಟಕ ಕೊಡಮಾಡುವ ಪ್ರತಿಷ್ಠಿತ ‘ಪೆರಿಯಾರ್ ಪ್ರಶಸ್ತಿ’ಗೆ ವೈಚಾರಿಕ ಚಿಂತಕರೂ ಆಗಿ ರುವ ಮುರುಘಾ ಮಠದ ಡಾ. ಶಿವಮೂರ್ತಿ ಶರಣರು ಆಯ್ಕೆಯಾಗಿದ್ದಾರೆ ಎಂದು ವೇದಿಕೆ ರಾಜ್ಯ ಸಂಚಾಲಕ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಚಿತ್ರದುರ್ಗ ಜಿಲ್ಲೆಯವರೇ ಆದ ಪೆರಿಯಾರ್ ತಮಿಳುನಾಡಿಗೆ ಮಾರ್ಗದರ್ಶನ ಮಾಡಿ ಬದಲಾವಣೆಯನ್ನು ತಂದ ವೈಚಾರಿಕ ನಾಯಕ. ಪೆರಿಯಾರ್ ಪೂರ್ವಿಕರು ಚಿತ್ರದುರ್ಗದವರು ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ.
1806ರಲ್ಲಿ ವೆಲ್ಲೂರು ದಂಗೆಯಲ್ಲಿ ತಮಿಳುನಾಡಿನ ಕೆಲವರು ಕರ್ನಾಟಕಕ್ಕೆ ವಲಸೆ ಬಂದರು. ಹೀಗಾಗಿ ಪೆರಿಯಾರ್ ಚಿತ್ರದುರ್ಗ ಜಿಲ್ಲೆಯವರು. ದೇಶದ ಸ್ವಾತಂತ್ರ ಹೋರಾಟದಲ್ಲಿ ಚಿತ್ರದುರ್ಗದ ಕಾಣಿಕೆಯೂ ಇದೆ. ತಮಿಳುನಾಡಿನಲ್ಲಿ ಪೆರಿಯಾರ್‌ರನ್ನು ಮರೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನಪರ ವಿಚಾರ ಹೊಂದಿದ್ದ ಪೆರಿಯಾರ್ ಪ್ರತಿಯೊಂದನ್ನೂ ಪರೀಕ್ಷಿಸಿ ವೈಜ್ಞಾನಿಕವಾಗಿ ಒಪ್ಪುತ್ತಿದ್ದರು. ಅವರಿಗೆ ಭಾರತ ರತ್ನ, ನೊಬೆಲ್ ಪ್ರಶಸ್ತಿ ದೊರಕಬೇಕಿತ್ತು. ಶ್ರೇಷ್ಠ ವ್ಯಕ್ತಿ ಎಲ್ಲಿಂದ ಬಂದರೂ ಶ್ರೇಷ್ಠವೇ ಎನ್ನುವುದನ್ನು ಯಾರು ಮರೆಯಬಾರದು ಎಂದರು.
ಬಸವಣ್ಣನ ಅನುಯಾಯಿಗಳು ವೈಚಾರಿಕ ಚಿಂತಕರೂ ಆಗಿರುವ ಮುರುಘಾ ಶರಣರಿಗೆ ಸೆ.21ರಂದು ಬೆಂಗಳೂರಿನ ಸೆನೆಟ್ ಹಾಲ್‌ನಲ್ಲಿ ‘ಪೆರಿಯಾರ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25 ಸಾವಿರ ರೂ.ನಗದು ಹಾಗೂ ಪೆರಿಯಾರ್ ಪ್ರತಿಮೆ, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದರು.
ವಿಚಾರ ವಾದಿಗಳ ವೇದಿಕೆ ರಾಜ್ಯ ಸಂಚಾಲಕ ಡಾ.ಎಂ.ವೆಂಟಕಸ್ವಾಮಿ ಮಾತನಾಡಿ, ಪೆರಿಯಾರ್ ಮಹಾನ್ ಆದರ್ಶ ವ್ಯಕ್ತಿ, ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದ ಅವರದು ವೈಚಾರಿಕ ಚಿಂತನೆಯಾಗಿತ್ತು. ಈ ನಿಟ್ಟಿನಲ್ಲಿ ಮುರುಘಾ ಮಠದ ಶರಣರ ಚಿಂತನೆಗೆಳು ವೈಚಾರಿಕತೆಯಿಂದ ಕೂಡಿರುವ ಕಾರಣಕ್ಕಾಗಿ ಅವರಿಗೆ ಪೆರಿಯಾರ್ ಪ್ರಶಸ್ತಿ ನೀಡಲು ವೇದಿಕೆ ತೀರ್ಮಾನಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ನರೇನಹಳ್ಳಿ ಅರುಣ್‌ಕುಮಾರ್, ಮುಖಂಡರಾದ ಹನುಮಂತಪ್ಪದುರ್ಗ, ಮಣಿ ವಣ್ಣನ್, ಮುರುಘ ರಾಜೇಂದ್ರ ಒಡೆಯರ್ ಉಪಸ್ಥಿತರಿದ್ದರು.

Write A Comment