ಕರ್ನಾಟಕ

ಅತ್ಯಾಚಾರದ ಪ್ರಕರಣದಲ್ಲಿ ಆರೋಪಿಯಾಗಿರುವ ರಾಘವೇಶ್ವರ ಶ್ರೀ ಪೀಠ ತ್ಯಾಗಕ್ಕೆ ಆಗ್ರಹ

Pinterest LinkedIn Tumblr

13BG_RAGHAVESHWARA_2241969f

ಸಾಗರ: ಅತ್ಯಾಚಾರದ ಪ್ರಕರಣದಲ್ಲಿ ಆರೋಪಿಯಾಗಿರುವ ರಾಮ ಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಮೇಲೆ ಮತ್ತೊಂದು ಅತ್ಯಾ ಚಾರದ ಪ್ರಕರಣದ ದಾಖಲಾಗಿದ್ದು, ಈಗಲಾದರೂ ಅವರು ಪೀಠ ತ್ಯಾಗ ಮಾಡುವ ಮೂಲಕ ಮಠದ ಘನತೆ ಹಾಗೂ ಗೌರವ ಕಾಪಾಡಬೇಕು ಎಂದು ಸಮಾನ ಮನಸ್ಕ ಹವ್ಯಕ ವೇದಿಕೆಯ ಅಶ್ವಿನಿ ಕುಮಾರ್ ಆಗ್ರಹಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಘವೇಶ್ವರ ಶ್ರೀಗಳು ಮಠದ ಪೀಠಾಧಿಪತಿಗಳಾದ ಆರಂಭದ ದಿನಗಳಿಂದಲೇ ಮಠವು ಒಂದಲ್ಲ ಒಂದು ರೀತಿಯ ವಿವಾದಕ್ಕೆ ಸಿಲುಕುತ್ತಿದೆ. ಈ ಹಿಂದೆ ಪ್ರಾಣಿ ಬಲಿಯ ಸೋಮಯಾಗ ಮಾಡಿದಾಗಲೆ ಆರಂಭವಾದ ವಿವಾದ ಈಗ ಎರಡು ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಯಾಗುವ ಮಟ್ಟಕ್ಕೆ ಬಂದು ನಿಂತಿದೆ ಎಂದರು.

ರಾಘವೇಶ್ವರ ಶ್ರೀಗಳು ಪೀಠಾರೋಹಣ ಮಾಡಿದ ಸಂದರ್ಭದಲ್ಲಿ ಅವರು ಮಾತ್ರ ಪದಾಧಿಕಾರಿಯಾಗಿರುವ ಏಕವ್ಯಕ್ತಿ ಧರ್ಮಚಕ್ರ ಟ್ರಸ್ಟ್ ರಚಿಸಿ ಅದಕ್ಕೆ ₨ 25 ಲಕ್ಷ ಹಣ ವರ್ಗಾವಣೆ ಮಾಡಲಾಗಿತ್ತು. ಈಗ ಆ ಟ್ರಸ್ಟ್‌ನ ಮೇಲೆ ಫೆರಾ ಕಾಯ್ದೆ ಉಲ್ಲಂಘಿಸಿರುವ ಆರೋಪ ಬಂದಿದ್ದು ಕೇಂದ್ರ ಸರ್ಕಾರ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ ಎಂದು ತಿಳಿಸಿದರು.

ಗೋವಿನ ಸಂರಕ್ಷಣೆ ಮಾಡುತ್ತೇವೆ ಎಂದು ಹೇಳುವ ಶ್ರೀಗಳು ಹುಲ್ಕೋಡು ಗ್ರಾಮದಲ್ಲಿ ಈ ಹಿಂದೆ ಆರಂಭಿಸಿದ್ದ ಗೋಶಾಲೆಯಲ್ಲಿನ ಗೋವುಗಳು ಈಗ ಹಸಿವಿನಿಂದ ನರಳುತ್ತಿವೆ. ಇಂತಹ ವಿದ್ಯಮಾನಗಳ ಬಗ್ಗೆ ಧ್ವನಿ ಎತ್ತುವ ಹವ್ಯಕರ ಮೇಲೆ ಬಹಿಷ್ಕಾರದ ಬೆದರಿಕೆ ಹಾಕಿ ಹಿಮ್ಮೆಟ್ಟಿಸುವ ಪ್ರಯತ್ನ ಮಠದಿಂದ ನಡೆಯುತ್ತಿದೆ ಎಂದು ದೂರಿದರು.

ಮಠದ ಈಗಿನ ಶ್ರೀಗಳಿಂದ ತೊಂದರೆಗೆ ಒಳಗಾದ ಮಹಿಳೆಯವರು ಇನ್ನೂ ಇದ್ದು ಭಯದಿಂದ ಅವರು ಸತ್ಯವನ್ನು ಹೇಳಲು ಮುಂದೆ ಬರುತ್ತಿಲ್ಲ. ಬ್ರಹ್ಮಚರ್ಯವನ್ನು ಕಳೆದುಕೊಂಡಿರುವ ಆರೋಪಕ್ಕೆ ಗುರಿಯಾಗಿರುವ ಶ್ರೀಗಳು ಗುರುಪೀಠದಲ್ಲಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಅರಣ್ಯ ಒತ್ತುವರಿ ಸಂಬಂಧ ಮಠದ ಮೇಲೆ ಅರಣ್ಯ ಇಲಾಖೆ ₨ 64.80ಲಕ್ಷ ದಂಡ ವಿಧಿಸಿದ್ದು, ಇದಕ್ಕೆ ಕಾರಣರಾದ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಖಂಡನೀಯ. ಮಠದವರು ಸರ್ಕಾರವನ್ನೆ ಖರೀದಿಸಿ ದ್ದಾರಾ ಎಂಬ ಅನುಮಾನ ಮೂಡುತ್ತಿದೆ. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಈ ವಿಷಯದಲ್ಲಿ ತಟಸ್ಥ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.

ಮಠದ ಈಗಿನ ಶ್ರೀಗಳು ಹವ್ಯಕ ಸಮಾಜ ಬಾಂಧವರಿಂದ ಅರಣ್ಯ ಒತ್ತುವರಿ ಜಾಗದಲ್ಲಿ ದೇವಸ್ಥಾನ ನಿರ್ಮಾಣಕ್ಕೆಂದು ಹಣ ಸಂಗ್ರಹಿ ಸುತ್ತಿದ್ದಾರೆ ಎಂದು ಬೆದರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಠಕ್ಕೆ ಹಣ ನೀಡಿದರೆ ಅದು ಸದ್ವಿನಿ ಯೋಗವಾಗುವುದಿಲ್ಲ. ಪ್ರಜ್ಞಾ ವಂತರಾದ ಹವ್ಯಕ ಸಮಾಜದವರು ಮಠಕ್ಕೆ ಆರ್ಥಿಕ ದಿಗ್ಭಂಧನ ಹಾಕುವುದೇ ಸೂಕ್ತ ಎಂದು ಹೇಳಿದರು.

ಸಮಾನ ಮನಸ್ಕ ಹವ್ಯಕ ವೇದಿಕೆಯ ಪ್ರಮುಖರುಗಳಾದ ಮಂಜುನಾಥ ಹೆಗಡೆ ಹೊಸಬಾಳೆ, ಇಂದಿರಾ ಮೋಹನ ಹೆಗಡೆ, ಮಹಾಬಲಗಿರಿ ಹೆಗಡೆ, ಮೋಹನ ಗ.ಹೆಗಡೆ ಹಾಜರಿದ್ದರು.

Write A Comment