ಕರ್ನಾಟಕ

ಇಲ್ಲೊಬ್ಬ ಅರ್ಚಕ ತನ್ನ ತಂಗಿಯನ್ನು ಕೊಲ್ಲಲು ಪ್ರಸಾದದಲ್ಲಿಯೇ ವಿಷ ಹಾಕಿ ಕೊಂಡಿದ್ದಾನೆ ! ಏನಿದು ಘಟನೆ ನೀವೇ ಓದಿ..

Pinterest LinkedIn Tumblr

prasaada

ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ ಸ್ವಂತ ತಂಗಿಯನ್ನೇ ಕೊಲೆಗೈಯ್ದಿದ್ದ ಅರ್ಚಕ ಮಂಜಯನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಕ್ಕಿತಿಮ್ಮಯನಹಟ್ಟಿಯಲ್ಲಿ ಶನಿವಾರ ಈ ಘಟನೆ ನಡೆದಿತ್ತು.

ಆರೋಪಿ ಮತ್ತು ಮೃತರಿಬ್ಬರು ಹೊನ್ನೇನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಮಂಜಯ್ಯ ಹಕ್ಕಿತಿಮ್ಮಯನಹಟ್ಟಿಯಲ್ಲಿರುವ ಶನಿ ದೇವಸ್ಥಾನದಲ್ಲಿ ಅರ್ಚಕನಾಗಿದ್ದಾನೆ. ಎರಡು ಕುಟುಂಬಗಳ ನಡುವೆ ಕಿರಾಣಿ ಅಂಗಡಿಯ ಕಾರಣಕ್ಕೆ ಬಹಳ ಕಾಲದಿಂದ ವೈಷಮ್ಯವಿತ್ತೆಂದು ಹೇಳಲಾಗುತ್ತಿದೆ.

ದ್ವೇಷದ ಹಿನ್ನೆಲೆಯಲ್ಲಿ ತಂಗಿಯ ಕುಟುಂಬವನ್ನೇ ಸರ್ವನಾಶ ಮಾಡಬೇಕೆಂದು ಯೋಜನೆ ರೂಪಿಸಿದ ದುಷ್ಟ ಮಂಜಯ್ಯರ ತಂಗಿ ಮತ್ತು ಆಕೆಯ ಕುಟುಂಬ ಶ್ರಾವಣ ಮಾಸದ ನಿಮಿತ್ತ ಕಳೆದ ಶನಿವಾರ ದೇವಸ್ಥಾನಕ್ಕೆ ಬಂದಾಗ ಪ್ರಸಾದದಲ್ಲಿ ವಿಷವನ್ನು ಹಾಕಿ ವಿತರಿಸಿದ್ದ. ದೇವರ ಪ್ರಸಾದವೆಂದು ಅದನ್ನು ಸ್ವೀಕರಿಸಿದ ಕುಟುಂಬ ಮನೆಗೆ ಬರುತ್ತಿದ್ದಂತೆ ಎಲ್ಲರಿಗೂ ವಾಂತಿಯಾಗಲು ಪ್ರಾರಂಭವಾಗಿದೆ. ತಕ್ಷಣ ಅವರನ್ನು ದಾವಣಗೆರೆಗೆ ಆಸ್ಪತ್ರೆಗೆ ಸೇರಿಸಲಾಗಿತ್ತು.

ಆದರೆ ಸಿದ್ಧಮ್ಮ(60) ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ದರು. ಅವರ ಗಂಡ ವೀರಭದ್ರಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ಮಗ ರಾಘವೇಂದ್ರ(40) ಮತ್ತು ಮೊಮ್ಮಗ ಆನಂದ(12) ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಹೊಸದುರ್ಗ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಈಗ ಪೊಲೀಸರು ಆರೋಪಿ ಮಂಜಯ್ಯನನ್ನು ಬಂಧಿಸಿದ್ದಾರೆ.

ಆರೋಪಿ ಮಂಜಯ್ಯ, ಆತನ ಪತ್ನಿ ವಿಶಾಲಮ್ಮ ಮತ್ತು ಮಕ್ಕಳಾದ ಉಮೇಶ್, ತಿಪ್ಪೇಶ್ ಸಿದ್ಧಮ್ಮ ಕುಟುಂಬವನ್ನು ನಾಶ ಮಾಡುವ ನಿಟ್ಟಿನಲ್ಲಿ ಈ ತಂತ್ರವನ್ನು ರೂಪಿಸಿದ್ದರು ಎನ್ನಲಾಗಿದೆ.

ತನ್ನ ಮೇಲಿನ ಆರೋಪವನ್ನು ನಿರಾಕರಿಸಿರುವ ಮಂಜಯ್ಯ, ತಾನು ದೇವರ ಪ್ರಸಾದದಲ್ಲಿ ವಿಷ ಹಾಕಿ ಉಣಿಸುವಂತಹ ಪಾಪಕೃತ್ಯವನ್ನು ಎಸಗುವಂತಹ ಘೋರ ಪಾಪವನ್ನು ಮಾಡಲಾರೆ ಎಂದಿದ್ದಾನೆ.

ಆದರೆ ದೇವಸ್ಥಾನಕ್ಕೆ ಹೋಗಿದ್ದ ಗ್ರಾಮಸ್ಥರಲ್ಲಿ ಮತ್ತೆ ಯಾರಿಗೂ ಕೂಡ ಅಸ್ವಸ್ಥರಾಗದೇ ಇರುವುದು ಇದು ಯೋಜಿತ ಕೊಲೆ ಎಂಬುದನ್ನು ಪುಷ್ಠೀಕರಿಸಿವೆ.

Write A Comment