ಬೆಂಗಳೂರು: ಸಾಮಾನ್ಯವಾಗಿ ಸರ್ಚ್ ಎಂಜಿನ್‌ಗೆ ಅನ್ವರ್ಥವೆಂಬಂತಿರುವ ಗೂಗಲ್‌ಗೆ ಸೆಡ್ಡು ಹೊಡೆಯುವಂಥ ಸರ್ಚ್ ಎಂಜಿನ್‌ವೊಂದು ಸೃಷ್ಟಿಯಾಗಿದೆಯಂತೆ.
ಹೌದು, ಅಂಥ ಸರ್ಚ್ ಎಂಜಿನ್ ನಾನು ಸಿದ್ಧಪಡಿಸಿದ್ದೇನೆ ಎಂದು ಭಾರತೀಯ ಮೂಲದ ಕೆನಡಾದ ನಾಗರಿಕನಾಗಿರುವ 16 ವರ್ಷದ ಬಾಲಕ ಅನ್ಮೋಲ್ ತುಕ್ರೆಲ್ ಹೇಳಿಕೊಂಡಿದ್ಧಾನೆ. ಇದು ಗೂಗಲ್‌ಗಿಂತಲೂ ಶೇ.47ರಷ್ಟು ಹೆಚ್ಚು ನಿಖರವಾಗಿದೆಯಂತೆ. ಈಗಿನ ಮುಖ್ಯಸ್ಥ ಸುಂದರ್ ಪಿಚೈ ಗಮನಿಸಲೇಬೇಕಾದ ಪ್ರಾಜೆಕ್ಟ್ ಇದು.
ಶಾಲಾ ಬಾಲಕನೊಬ್ಬ ತನ್ನ ಹೈಸ್ಕೂಲ್ ಪ್ರಾಜೆಕ್ಟ್‌ಗಾಗಿ ತಯಾರಿಸಿದ ಇಂಥದ್ದೊಂದು ಸರ್ಚ್ ಎಂಜಿನ್ ಇದೀಗ ಆ ಕ್ಷೇತ್ರದಲ್ಲಿ ನಂ.1 ಆಗಿರುವ ಗೂಗಲ್‌ಗೆ ತಲೆನೋವು ತರುವ ಸಾಧ್ಯತೆ ಇಲ್ಲ. ಏಕೆಂದರೆ ಇದು 13ರಿಂದ 18 ವರ್ಷದವರಿಗಾಗಿ ಜಾಗತಿಕ ಮಟ್ಟದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಗೂಗಲ್ ಸೈನ್ಸ್ ಫೇರ್‌ನಲ್ಲಿ ಪ್ರದರ್ಶನಗೊಂಡ ಪ್ರಾಜೆಕ್ಟ್ ಆಗಿದೆ. ಇದನ್ನು ಇತ್ತೀಚೆಗಷ್ಟೇ 10ನೇ ತರಗತಿ ಪೂರ್ಣಗೊಳಿಸಿದ ಭಾರತೀಯ ಮೂಲದ ವಿದ್ಯಾರ್ಥಿ ಅನ್ಮೋಲ್ ಸಿದ್ಧಪಡಿಸಿದ್ಧಾನೆ.
ಅದನ್ನು ವಿನ್ಯಾಸಗೊಳಿಸಲು ಆತ ಒಂದೆರಡು ತಿಂಗಳು ತೆಗೆದುಕೊಂಡಿದ್ದನಂತೆ. ಆದರೆ ಎಂಜಿನ್ ಅನ್ನ ಕೋಡ್ ಮಾಡಲು ಕೇವಲ 60 ಗಂಟೆಗಳನ್ನಷ್ಟೇ ತೆಗೆದುಕೊಂಡಿದ್ಧಾನೆ ಅನ್ನುವುದು ವಿಶೇಷ.
ನಾವು ವೈಯಕ್ತಿಕವಾಗಿ ಸರ್ಚ್ ಸ್ಪೇಸ್ ಇರುವ ಸರ್ಚ್ ಎಂಜಿನ್ ರೂಪಿಸಲು ನಿರ್ಧರಿಸಿದ್ದೆ. ಅದು ಈವರೆಗೆ ಸಾಧ್ಯವಾಗದ ಅಸಾಧಾರಣ ವಿಷಯವಾಗಿತ್ತು. ಆದರೆ ಗೂಗಲ್ ಇದನ್ನು ಈಗಾಗಲೇ ಮಾಡುತ್ತಿದೆ ಎಂದು ಗೊತ್ತಾದಾಗ ನಾನು ಅದನ್ನುಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದೆ ಎನ್ನುತ್ತಾರೆ ಅನ್ಮೋಲ್. ಸದ್ಯ ಈ ಅಭೂತಪೂರ್ವ ಪ್ರತಿಭೆ ಅನ್ಮೋಲ್ ಬೆಂಗಳೂರಿನಲ್ಲಿದ್ದಾನೆ. ಆತ ಇಲ್ಲಿ ಎರಡು ವಾರಗಳ ಕಾಲ ಬೆಂಗಳೂರು ಮೂಲದ ಆಡ್‌ಟೆಕ್ ಸಂಸ್ಥೆಯ ಐಸ್ ಕ್ರೀಂ ಲ್ಯಾಬ್‌ನಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾನೆ.