ಕರ್ನಾಟಕ

ಜೋಗ ಜಲಪಾತಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು

Pinterest LinkedIn Tumblr

jogaಸಾಗರ: ಜೋಗ ಆಮೋಘ ! ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಮನ ಸೋಲದವರು ಯಾರು? ಇಂತಹ ಜೋಗ ಜಲಪಾತಕ್ಕೆ ಮಳೆಗಾಲವಾಗಿರುವುದರಿಂದ ಜೀವ ಕಳೆ ಬಂದಿದೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆಯು ಗಣನೀಯವಾಗಿ ಏರಿಕೆ ಕಂಡಿದೆ.

ಈ ಹಿನ್ನೆಲೆಯಲ್ಲಿ ಜೋಗ ಜಲಪಾತದಲ್ಲಿ ಅಪರಾಧಗಳ ನಿಯಂತ್ರಣ ಮತ್ತು ವಿಶೇಷ ರಕ್ಷಣೆ ಕಲ್ಪಿಸಲು ಸಿಸಿ ಟಿವಿ ಕ್ಯಾಮೆರಾ ಆಳವಡಿಸಲಾಗಿದೆ, ಜೋಗದ ಗುಂಡಿಯ ಮಾರ್ಗವು ಸೇರಿದಂತೆ ಪ್ರಮುಖವಾಗಿ ಅಗತ್ಯವಿರುವ 25 ಸ್ಥಳಗಳಲ್ಲಿ ಅತ್ಯಾಧುನಿಕ ಮಾದರಿಯ ಕ್ಯಾಮೆರಾಗಳನ್ನು ಸುಸಜ್ಜಿತವಾದ ಸ್ಟೀಲ್ ಕಂಬಗಳ ಮೇಲೆ ಗುಡುಗು, ಸಿಡಿಲು ನಿರೋಧಕ ಯಂತ್ರಗಳ ಸಮೇತ ಅಳವಡಿಸಲಾಗಿದೆ.

ಈ ಎಲ್ಲಾ ಕ್ಯಾಮೆರಾಗಳು ಪೊಲೀಸ್ ಹೊರ ಠಾಣೆಯಲ್ಲಿನ ನಿಯಂತ್ರಣ ಕೊಠಡಿಯಿಂದ ಕಾರ್ಯ ನಿರ್ವಹಿಸಲಿವೆ. ಇದರೊಂದಿಗೆ ಜೋಗಕ್ಕೆ ಬರುವ ಪ್ರವಾಸಿಗರ ಮನಸ್ಸಿಗೆ ಮುದ ನೀಡುವ ಸುಮಧುರ ಸಂಗೀತವನ್ನು ಇಂಪಾಗಿ ಆಲಿಸಲು ಅನುಕೂಲವಾಗುವಂತೆ ಎಲ್ಲೆಡೆ ಉಪಕರಣಗಳನ್ನು ಅಳವಡಿಸಲಾಗುತ್ತಿದೆ. ಗಾಳಿ, ಮಳೆ, ಬಿಸಿಲಿನ  ಅಡಚಣೆ ಇಲ್ಲದೆ ಸುಮಾರು 5 ಸಾವಿರ ಪ್ರವಾಸಿಗರು ಒಮ್ಮೆಲೆ ನಿಂತು ಜಲಪಾತ ವೀಕ್ಷಿಸಲು ಅಧುನಿಕ ಮಾದರಿಯ ವೀಕ್ಷಣೆ ತಾಣವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಪ್ರವಾಸಿಗರಿಗೆ ಜೋಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇನ್ನಷ್ಟು ಅನುಕೂಲವಾಗಲಿದೆ.

Write A Comment