ಅಂತರಾಷ್ಟ್ರೀಯ

ಇಸಿಸ್ ಉಗ್ರರು ನಮ್ಮನ್ನು ಗೌರವದಿಂದ ನೋಡಿಕೊಂಡರು…ಯಾವುದೇ ರೀತಿಯ ಹಿಂಸೆ ಕೊಟ್ಟಿಲ್ಲ: ಅಪಹರಣಕಾರರಿಂದ ಪಾರಾಗಿ ಬಂದ ಲಕ್ಷ್ಮಿಕಾಂತ್

Pinterest LinkedIn Tumblr

Lakshmikant

ಹೈದರಾಬಾದ್: ನಮಗೆ ಲಿಬಿಯಾದಲ್ಲಿ ಯಾರೂ ಕೂಡ ತೊಂದರೆ ಕೊಡಲಿಲ್ಲ. ಇಸಿಸ್ ಉಗ್ರರು ನಮ್ಮನ್ನು ತುಂಬಾ ಗೌರವದಿಂದ ನೋಡಿಕೊಂಡರು ಎಂದು ಲಿಬಿಯಾದಲ್ಲಿ ಇಸಿಸ್ ಉಗ್ರರಿಂದ ಅಪರಹರಣಕ್ಕೊಳಗಾಗಿದ್ದ ರಾಯಚೂರಿನ ಪ್ರೊ.ಲಕ್ಷ್ಮಿಕಾಂತ್ ರಾಮಕೃಷ್ಣ ಅವರು ಮಂಗಳವಾರ ಹೇಳಿದ್ದಾರೆ.

ಲಿಬಿಯಾದಲ್ಲಿ ಪ್ರಾಧ್ಯಾಪಕರಾಗಿದ್ದ ಲಕ್ಷ್ಮಿಕಾಂತ್ ಅವರು ಇಂದು ಭಾರತಕ್ಕೆ ಮರಳಿದ್ದು, ಹೈದರಾಬಾದ್‌ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆಲ್ಲರಿಗೂ ನನ್ನ ಧನ್ಯವಾದಗಳು ಎಂದರು.

ನಮ್ಮನ್ನು ಅಪಹರಿಸಿದ್ದ ಉಗ್ರರು ನಮ್ಮ ವಿದ್ಯಾರ್ಥಿಗಳಾಗಿದ್ದರು. ಹೀಗಾಗಿ ಅವರು ನಮಗೆ ಯಾವುದೇ ರೀತಿಯ ತೊಂದರೆ ನೀಡಿಲ್ಲ. ಯಾವುದೇ ತೊಂದರೆಯಾದರೆ ನಮಗೆ ತಿಳಿಸಿ ಎಂದಿದ್ದಾರೆ. ಅಲ್ಲದೆ ಭಾರತಕ್ಕೆ ಹೋದ ಮೇಲೆ ಮೆಸೇಜ್ ಮಾಡುವಂತೆ ತಿಳಿಸಿದ್ದಾರೆ ಎಂದು ಲಕ್ಷ್ಮಿಕಾಂತ್ ಹೇಳಿದ್ದಾರೆ.

ಇಸಿಸ್ ಉಗ್ರರು ನಮ್ಮನ್ನು ತುಂಬಾ ಗೌರವದಿಂದ ಕಂಡಿದ್ದಾರೆ. ಅಧ್ಯಾಪಕರ ಬಗ್ಗೆ ಅವರಿಗೆ ಅಪಾರ ಗೌರವವಿದೆ. ಹೀಗಾಗಿ ಅವರು ಉಳಿದ ಪ್ರಾಧ್ಯಪಕರ ಬಗ್ಗೆ ಚಿಂತಿಸಬೇಡಿ ಎಂದಿದ್ದರು ಎಂದು ಲಕ್ಷ್ಮಿಕಾಂತ್ ತಿಳಿಸಿದ್ದಾರೆ.

ಲಿಬಿಯಾದ ಟ್ರೈಪೋಲಿಯಾದ ಸಿರ್ತೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ನಾಲ್ವರು ಭಾರತೀಯರನ್ನು ಕಳೆದ ಗುರುವಾರ ಸಂಜೆ ಉಗ್ರರು ಅಪಹರಿಸಿದ್ದರು. ಬಳಿಕ ಕನ್ನಡಿಗರಾದ ಲಕ್ಷ್ಮಿಕಾಂತ್ ಹಾಗೂ ವಿಜಯ್ ಕುಮಾರ್ ಬಿಡುಗಡೆಯಾಗಿದ್ದು, ಸುರಕ್ಷಿತರಾಗಿ ದೇಶಕ್ಕೆ ಮರಳಿದ್ದಾರೆ.

Write A Comment