ಕರ್ನಾಟಕ

ಪತಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ ಪರಾರಿಯಾಗಿದ್ದ ಪತ್ನಿ ಕೊನೆಗೂ ಪೋಲೀಸರ ಬಲೆಗೆ

Pinterest LinkedIn Tumblr

mur

ಬೆಂಗಳೂರು: ಪತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ನಂತರ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಮಲ್ಲೇಶ್ವರಿ (32) ಎಂಬಾಕೆಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮಲ್ಲೇಶ್ವರಿ, ಪತಿ ವಿಜಯ್‌ಕುಮಾರ್ ಹಾಗೂ ಮೂವರು ಮಕ್ಕಳ ಜತೆ ಒಂದು ವರ್ಷದಿಂದ ಚೌಡೇಶ್ವರಿನಗರದಲ್ಲಿ ನೆಲೆಸಿದ್ದರು.

ಮೇ 21ರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದ ಪತಿ ಜತೆ ಜಗಳವಾಡಿದ್ದ ಮಲ್ಲೇಶ್ವರಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಳು. ನಂತರ ಮೃತದೇಹಕ್ಕೆ ಬೆಂಕಿ ಹಚ್ಚಿ, ಮಕ್ಕಳೊಂದಿಗೆ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಈ ನಡುವೆ ಮಲ್ಲೇಶ್ವರಿ, ಪತಿಯ ಸಾವಿನ ಬಗ್ಗೆ ಅಕ್ಕಪಕ್ಕದ ಮನೆಯವರು ಏನು ಮಾತನಾಡುತ್ತಿದ್ದಾರೆ ಎಂದು ತಿಳಿದುಕೊಂಡು ಬರಲು ಮಕ್ಕಳಾದ ಉಮಾ ಮತ್ತು ಮಂಜುನಾಥ್‌ನನ್ನು ಚೌಡೇಶ್ವರಿನಗರಕ್ಕೆ ಕಳುಹಿಸಿದ್ದರಳು. ಆಗ ಮಕ್ಕಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದರು.

ಆದರೆ, ಅವರು ತಾಯಿ ಎಲ್ಲಿದ್ದಾಳೆ ಎಂಬ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿರಲಿಲ್ಲ. ನಂತರ ತಂದೆ ಇಲ್ಲದ ಮಕ್ಕಳು ಎಂಬ ಕಾರಣಕ್ಕೆ ಪೊಲೀಸರು, ಸರ್ಕಾರೇತರ ಸಂಸ್ಥೆಯ ನೆರವಿನಿಂದ ಉಮಾಳನ್ನು ಕಾಲೇಜಿಗೆ ಹಾಗೂ ಮಂಜುನಾಥ್‌ನನ್ನು ಶಾಲೆಗೆ ಸೇರಿಸಿ ಮಾನವೀಯತೆ ಮೆರೆದಿದ್ದರು.

ಇತ್ತ ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಷಯ ತಿಳಿದುಕೊಂಡ ಮಲ್ಲೇಶ್ವರಿ, ಬಂಧನದ ಭೀತಿಯಿಂದ ಐದು ವರ್ಷದ ಮಗುವಿನ ಜತೆ ಮಂತ್ರಾಲಯಕ್ಕೆ ತೆರಳಿದ್ದಳು. ಜುಲೈ 19ರಂದು ಚೌಡೇಶ್ವರಿನಗರದ ಪರಿಚಿತ ಮಹಿಳೆಗೆ ಕರೆ ಮಾಡಿದ್ದ ಆಕೆ, ಜೀವನ ನಿರ್ವಹಣೆಗೆ ಹಣಕಾಸಿನ ನೆರವು ಕೇಳಿದ್ದಳು. ಮಲ್ಲೇಶ್ವರಿ ಕರೆ ಮಾಡಿದ್ದ ಸಂಗತಿಯನ್ನು ಆ ಮಹಿಳೆ ಪೊಲೀಸರಿಗೆ ತಿಳಿಸಿದ್ದರು.

Write A Comment