ಕರ್ನಾಟಕ

ಕಿಡ್ನಿಗೆ ಕೊಟ್ಟಿದ್ದು ಮೂರಲ್ಲ, ರು.13 ಲಕ್ಷಕ್ಕೆ

Pinterest LinkedIn Tumblr

Kidney-sellingಮಾಗಡಿ: ಗ್ರಾಪಂ ಚುನಾವಣೆ ಖರ್ಚಿಗಾಗಿ ಸಾಲ ತೀರಿಸಲು ತಾಲೂಕಿನ ನಾಗಶೆಟ್ಟಿಹಳ್ಳಿ ಮಹಿಳೆಯೊಬ್ಬಳ ಕಿಡ್ನಿ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, 3 ವರೆ ಲಕ್ಷಕ್ಕೆ ಮಾರಾಟ ಮಾಡಿದ್ದು ಮೊದಲು ತಿಳಿದಿತ್ತು. ಈಗ ಪೊಲೀಸರ ತನಿಖೆಯಿಂದ 13 ಲಕ್ಷಕ್ಕೆ ಕಿಡ್ನಿ ಮಾರಾಟವಾಗಿರುವುದು ಬೆಳಕಿಗೆ ಬಂದಿದೆ.

ಕಿಡ್ನಿ ಮಾರಾಟ ಸೂತ್ರಧಾರ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುರೇಶ್ (ಮೂಲತಃ ಶಿವಮೊಗ್ಗ ಜಿಲ್ಲೆಯ ನಲ್ಲೂರು ಗ್ರಾಮದವರು) ಪಾತ್ರಧಾರಿಯಾಗಿದ್ದು ಈ ಹಗರಣ ದಿಂದ 7 ಲಕ್ಷವರೆಗೂ ಹಣ ಪಡೆಯಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಈಗ ಸುರೇಶ್‍ನ ಹಿಡಿಯಲು ವಿಶೇಷ ತಂಡ ರಚನೆ ಮಾಡಿದ್ದಾರೆ.

ಸ್ಥಳೀಯರ ವಿಚಾರಣೆ : ನಾಗಶೆಟ್ಟಿಹಳ್ಳಿ ಮಹಿಳೆಯೊಬ್ಬಳ ಕಿಡ್ನಿಯನ್ನು ಪಡೆದಿರುವ ಶ್ರೀನಿವಾಸ್ ಪ್ರಕರಣದಲ್ಲಿ ಮಾಗಡಿಯ ಸ್ಥಳೀಯರು ಕೂಡ ಕಿಡ್ನಿ ಧಂದೆ ಆರೋಪಿ ಸುರೇಶ್‍ನ ಸಂಪರ್ಕ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಪಟ್ಟಣದ ಜ್ಯೋತಿನಗರದ ಕಿಡ್ನಿ ಮಂಜು ಮತ್ತು ಮತ್ತೊಬ್ಬ ಮಂಜುನಾಥ್ ಹಾಗೂ ಕಿಡ್ನಿ ಕೊಟ್ಟ ಮಹಿಳೆಯ ತಂಗಿ ಕರಗದಹಳ್ಳಿ ಉಮಾದೇವಿ ಕೂಡ ಸುರೇಶ್‍ನ ಸಂಪರ್ಕದಲ್ಲಿ ಇರುವುದು ಕಂಡು ಬಂದಿದ್ದು ಈ ಮೂವರನ್ನು ಮಾಗಡಿ ಪೊಲೀಸರು ವಿಚಾರಣೆಗೆ ಶನಿವಾರ ಒಳಪಡಿಸಿದ್ದರು.

ಮಲ್ಲಿಗೆ ಆಸ್ಪತ್ರೆಯಲ್ಲಿ ಭೇಟಿ: ಶ್ರಿನಿವಾಸ್‍ನ ತಾಯಿಗೆ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಾಗ ಸುರೇಶ್ ಅವರನ್ನು ಪರಿಚಯ ಮಾಡಿಕೊಂಡು ನಿಮ್ಮ ತಾಯಿಗೆ ಕಿಡ್ನಿ ಕೊಡಿಸುವುದಾಗಿ 13 ಲಕ್ಷದ ಡೀಲ್ ಕುದುರಿಸಿದ್ದಾನೆ. ಇದಕ್ಕಾಗಿ ಸುರೇಶ್ ಖುದ್ದಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದ ಎಂದು ಮಾಗಡಿ ಪೊಲೀಸರ ವಶದಲ್ಲಿರುವ ಶ್ರೀನಿವಾಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ. ಮಾಗಡಿಯಲ್ಲಿ ಕಿಡ್ನಿ ರ್ಯಾಕೆಟ್ ಹೆಚ್ಚಾಗಿರುವುದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವೃತ್ತ ನಿರೀಕ್ಷಕ ನಂದೀಶ್ ಕಿಡ್ನಿ ಉಖಿSಫಿಯಾವನ್ನು ಮಾಗಡಿಯಲ್ಲಿ ಬೇರು ಸಮೇತ ಹಿಡಿಯಬೇಕೆಂದು ಚುರುಕಿನ ಕಾರ್ಯಚರಣೆ ಮಾಡುತ್ತಿದ್ದಾರೆ.

Write A Comment