ಕನ್ನಡ ವಾರ್ತೆಗಳು

ಬಾಳೆಹಣ್ಣು ಸೇವಿಸಿ ಧೂಮಪಾನ ತ್ಯಜಿಸಿ

Pinterest LinkedIn Tumblr

banana-newಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿನಂತೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಆರೋಗ್ಯದ ಸ್ಥಿತಿಗತಿ ನಿರ್ಧರಿತವಾಗುತ್ತದೆ. ಊಟದ ವಿಷಯದಲ್ಲಿ ನಾವು ಎಷ್ಟು ಕಾಳಜಿ ವಹಿಸುತ್ತೇವೋ ಹಾಗೆಯೇ ನಾವು ಸೇವಿಸುವ ಹಣ್ಣುಗಳ ಬಗ್ಗೆಯೂ ಮುತುವರ್ಜಿ ವಹಿಸಬೇಕಾಗುತ್ತಾದೆ.

ಬಾಳೆಹಣ್ಣಿನಲ್ಲಿ ಹೇರಳವಾದ ವಿಟಮಿನ್‌ಗಳು,  ಕಾರ್ಬೋಹೈಡ್ರೇಟ್ಸ್. ನಾರಿನಾಂಶ, ಕ್ಯಾಲ್ಸಿಯಂ, ಪ್ರೋಟೀನ್,  ಎಲ್ಲದಕ್ಕಿಂತಲೂ ಮುಖ್ಯವಾಗಿ ಪೊಟ್ಯಾಶಿಯಂನ್ನು ಹೊಂದಿರುವುದರಿಂದ ಇದು ಹೃದ್ರೋಗ ಹಾಗೂ ರಕ್ತದೊತ್ತಡದ ತೊಂದರೆಯುಳ್ಳವರಿಗೆ ಉಪಕಾರಿಯೆನಿಸಿದೆ. ಬಾಳೆಹಣ್ಣು ಧಾರ್ಮಿಕ ವಿಧಿವಿಧಾನಗಳಲ್ಲಿ ಅತಿಥಿ ಸತ್ಕಾರಗಳಲ್ಲಂತೂ ಬಾಳೆ ಇಲ್ಲದಿರುವುದೇ ಇಲ್ಲ.

ರಕ್ತಹೀನತೆಯಿಂದ ಬಳಲುತ್ತಿರುವವರು ಈ ಹಣ್ಣನ್ನು ಕಿತ್ತಳೆ ಹಣ್ಣಿನ ಜತೆಗೆ ಸೇರಿಸಿ ತಿಂದರೆ ಗುಣಮುಖರಾಗಬಹುದು. ನರಗಳಿಗೆ ಬೇಕಾದ ರಂಜಕಾಂಶವನ್ನು ಬಾಳೆಹಣ್ಣು ಒದಗಿಸಿಕೊಡುವುದರಿಂದ ಸ್ನಾಯುಗಳು ಬಲವಾಗುತ್ತದೆ.

ಹೆಚ್ಚಿನ ಪೊಟ್ಯಾಶಿಯಂನ್ನು ಈ ಹಣ್ಣು ಹೊಂದಿರುವುದರಿಂದ ಮೂಳೆಗಳಿಗೆ ಅತ್ಯುತ್ತಮ. ಹಾಗಾಗಿ ವ್ಯಾಯಾಮ ಮಾಡುವವರು, ಆಟಗಾರರು, ಬಾಳೆಹಣ್ಣನ್ನು ಸೇವಿಸಲೇಬೇಕು ಎನ್ನುವುದು  ಆರೋಗ್ಯ ತಜ್ಞರ ಸಲಹೆ. ಇನ್ನು ಹಣ್ಣಾದ ಬಾಳೆಹಣ್ಣು ಸೇವಿಸುವುದರಿಂದ ಮಾರಕ ಕ್ಯಾನ್ಸರ್ ರೋಗದಿಂದ ದೂರವಿರಬಹುದು ಎಂದು ಕೆಲ ಸಂಶೋಧನೆಗಳು ಹೇಳಿವೆ.

ಖಿನ್ನತೆಯಿಂದ ಹೊರಬರಲು ಬಾಳೆಹಣ್ಣು ಸಹಾಯ ಮಾಡುತ್ತದೆ. ಇದರಲ್ಲಿನ  ಟ್ರಿಪ್ರೋಪ್ಯಾನ್ ಎಂಬ ಪ್ರೊಟೀನ್ ಮನಸ್ಸನ್ನು ಉಲ್ಲಸಿತವಾಗಿಡುತ್ತದೆ. ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಮಿದುಳಿಗೆ ಆಮ್ಲಜನಕದ ಪೂರೈಕೆಯನ್ನು ಮಾಡುವುದರಿಂದ ಮಿದುಳು ಚುರುಕುಗೊಳ್ಳುತ್ತದೆ.

ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯ ಜತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಸಿಗರೇಟ್ ಚಟಕ್ಕೆ ಬಿದ್ದವರು ಸಿಗರೇಟ್ ಸೇದಬೆಕೆನಿಸಿದಾಗೆಲ್ಲಾ ಬಾಳೆಹಣ್ಣನ್ನು ತಿಂದರೆ ಅದರಲ್ಲಿನ ಬಿ-6, ಬಿ-12, ಮ್ಯಾಂಗನೀಸ್ ಅಂಶವು ಮನಸ್ಸನ್ನು ನಿಯಂತ್ರಿಸುವುದಕ್ಕೆ ಸಹಾಯಕವಾಗುವುದಂತೆ. ಆ ಮೂಲಕ ಚಟಮುಕ್ತರಾಗಿ ಹೆಚ್ಚು ಕಾಲ ಬದುಕಬಹುದು.

ಬಾಳೆಹಣ್ಣಿನ ಸೇವನೆಯಿಂದ ಪಾರ್ಶ್ವವಾಯು ರೋಗದಿಂದ ದೂರವಿಗಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಗರ್ಭಣಿಯರು ಬಾಳೆಹಣ್ಣು ಸೇವಿಸಿದರೆ ಮಗುವಿಗೆ ಹೆಚ್ಚು ಉಪಯುಕ್ತ. ಇದರಲ್ಲಿ ಪಾಲಿಕ್ ಆಸಿಡ್ ಹೇರಳವಾಗಿರುವುದರಿಂದ ಗರ್ಭಾಶಯದಲ್ಲಿರುವ ಮಗುವಿನ ಬೆಳವಣಿಗೆಗೆ ಹೆಚ್ಚು ಸಹಾಯ ಮಾಡುತ್ತದೆ.

Write A Comment