ಕರ್ನಾಟಕ

ರಾಜ್ಯ ಸರ್ಕಾರದ ವೆಬ್‌ಸೈಟ್‌ನಲ್ಲಿ ನಿಮ್ಮ ಜಾತಿ, ಧರ್ಮ ಬಹಿರಂಗ

Pinterest LinkedIn Tumblr

casteಬೆಂಗಳೂರು: ಇನ್ನುಮುಂದೆ ನಿಮ್ಮ ಜಾತಿ, ಧರ್ಮ ಹಾಗೂ ಮೀಸಲಾತಿಯಡಿ ನೀವು ಸರ್ಕಾರದಿಂದ ಪಡೆಯು ಸೌಲಭ್ಯಗಳು ರಹಸ್ಯವಾಗಿ ಉಳಿಯುವುದಿಲ್ಲ.

ಹೌದು, ರಾಜ್ಯ ಸರ್ಕಾರ ಇತ್ತೀಚಿಗೆ ನಡೆಸಿದ ಜಾತಿ ಸಮೀಕ್ಷೆಯಲ್ಲಿ ಸಂಗ್ರಹಿಸಿದ ನಿಮ್ಮ ಜಾತಿ, ಉಪ ಜಾತಿ, ಪಂಗಡ, ವರ್ಗ ಹಾಗೂ ಧರ್ಮ ಸೇರಿದಂತೆ ಇತರೆ ವಿವರಗಳು ಈಗ ರಹಸ್ಯವಾಗಿ ಉಳಿದಿಲ್ಲ.

ಸಮೀಕ್ಷೆ ವೇಳೆ ನೀವು ನೀಡಿದ ನಿಮ್ಮ ಸಾಮಾಜಿಕ, ಆರ್ಥಿಕ ಹಾಗೂ ಕುಟುಂಬಕ್ಕೆ ಸಂಬಂಧಿಸಿದ 21 ಬಗೆಯ ವಿವರಗಳು ಈಗ ರಾಜ್ಯ ಸರ್ಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಆಂಗ್ಲ ಮಾಧ್ಯವೊಂದು ವರದಿ ಮಾಡಿದೆ.

ಎರಡು ತಿಂಗಳ ಹಿಂದಷ್ಟೇ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿದ್ದ ಸಾಮಾಜಿಕ – ಆರ್ಥಿಕ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಇನ್ನಷ್ಟೇ ಸಲ್ಲಿಸಬೇಕಾಗಿದೆ. ಹಾಗಿದ್ದರೂ ಈ ಸಮೀಕ್ಷೆಯಡಿ ಸಂಗ್ರಹಿಸಲಾದ ವಿವಾದಾತ್ಮಕ ಜನಗಣತಿಯ ವಿವರಗಳು ಈಗ ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತೆ ಸರ್ಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು, ಜಾತಿ ಗಣತಿಯ ಸಂದರ್ಭದಲ್ಲಿ 21 ಬಗೆಯ ವಿವರಗಳನ್ನು ಸಂಗ್ರಹಿಸಲಾಗಿತ್ತು. ವ್ಯಕ್ತಿಯ ಜಾತಿ ಸಹಿತವಾಗಿ ಆ ವಿವರಗಳನ್ನು ಈಗ ಸರಕಾರದ ವೆಬ್‌ ಸೈಟಿಗೆ ಹಾಕಲಾಗಿದೆ. ಯಾವನೇ ಒಬ್ಬ ವ್ಯಕ್ತಿ ತನ್ನ ಜಾತಿ, ಸಮುದಾಯಕ್ಕೆ ಮೀಸಲಿರುವ ಸೌಕರ್ಯ – ಸೌಲಭ್ಯಗಳನ್ನು ಸರಕಾರದಿಂದ ಪಡೆಯುವುದಾದರೆ ಅದನ್ನು ಎಲ್ಲರಿಗೂ ತಿಳಿಯುವಂತೆ ಬಹಿರಂಗಪಡಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಬಗ್ಗೆ ನಾವು ಕೇವಲ ಸರಕಾರದ ಸೂಚನೆಗಳನ್ನು ಮಾತ್ರವೇ ಅನುಸರಿಸುತ್ತಿದ್ದೇವೆ’ ಎಂದಿದ್ದಾರೆ.

Write A Comment