ಕರ್ನಾಟಕ

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ಚಿಂಪಾಂಜಿ ‘ಮಿರೆಲ್ಲಾ’ ಇನ್ನಿಲ್ಲ

Pinterest LinkedIn Tumblr

2443820mirella-300x169

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಹೆಣ್ಣು ಚಿಂಪಾಂಜಿ ‘ಮಿರೆಲ್ಲಾ’ ಸೋಮವಾರ ಸಾವನ್ನಪ್ಪಿದೆ.

ಮೈಸೂರು ಮೃಗಾಲಯದ 26 ವರ್ಷದ ಹೆಣ್ಣು ಚಿಂಪಾಜಿ ಮಿರೆಲ್ಲಾ ಇಲ್ಲಿಗೆ ಬರುವ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರಾಣಿಯಾಗಿತ್ತಲ್ಲದೇ ತನ್ನ ತುಂಟತನದ ಮೂಲಕ ಜನರ ಮನಗೆಲ್ಲಲು ಸಫಲವಾಗಿತ್ತು.

ಸೋಮವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಮಿರೆಲ್ಲಾ ಆರೋಗ್ಯದಲ್ಲಿ ಏರುಪೇರು ಕಂಡು ಬಂತು ಎನ್ನಲಾಗಿದ್ದು ಸುಮಾರು 10 ಗಂಟೆಗೆ ಸಾವನ್ನಪ್ಪಿದೆ. ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದ್ದು, ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ಸಿದ್ದತೆಗಳು ನಡೆಯುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment