ಕರ್ನಾಟಕ

ಟ್ರಾಕ್ಟರ್​ಗೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿದ ಐರಾವತ; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

Pinterest LinkedIn Tumblr

accident

ಹಿರಿಯೂರು: ಬೆಂಗಳೂರಿಗೆ ಬರುತ್ತಿದ್ದ ಐರಾವತ ಬಸ್ ಹಿರಿಯೂರು ಬಳಿ ಟ್ರಾಕ್ಟರ್​ಗೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿದ್ದು, ಅಪಘಾತದಲ್ಲಿ ಟ್ರಾಕ್ಟರ್ ಚಾಲಕ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಟ್ರಾಕ್ಟರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದಂತೆ ಬಸ್​ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಶಿರಡಿಯಿಂದ – ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿಯ ಐರಾವತ ಬಸ್ ಹಿರಿಯೂರಿನ ಜವಗೊಂಡನಹಳ್ಳಿ ಔಟ್​ಪೋಸ್ಟ್ ಬಳಿ ಟ್ರಾಕ್ಟರ್​ಗೆ ಡಿಕ್ಕಿ ಹೊಡೆದಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಬಸ್ ಲಾರಿಯನ್ನು ಓವರ್​ಟೇಕ್ ಮಾಡುವ ಸಂದರ್ಭದಲ್ಲಿ ಟ್ರಾಕ್ಟರ್​ಗೆ ಡಿಕ್ಕಿ ಹೊಡಿದಿದೆ. ಟ್ರಾಕ್ಟರ್​ಗೆ ಡಿಕ್ಕಿಯಾದ ನಂತರ ಬಸ್ ಡಿವೈಡರ್ ಮೇಲೆ ಹತ್ತಿ ನಿಂತಿದೆ.

Write A Comment