ಕರ್ನಾಟಕ

ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ನಂಜನಗೂಡು ಶ್ರೀಕಂಠೇಶ್ವರ

Pinterest LinkedIn Tumblr

20-1434797928-nanjangud

ಮೈಸೂರು, ಜೂ. 20 : ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಐತಿಹಾಸಿಕ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ 1 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಣೆಯಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಸಂಗ್ರಹವಾಗಿರುವ ಹೆಚ್ಚು ಹಣವಿದಾಗಿದೆ. ಶುಕ್ರವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯವನ್ನು ಆರಂಭಿಸಲಾಗಿತ್ತು. ದೇವಾಲಯದ 10 ಹುಂಡಿಗಳಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಯಿತು. ಒಟ್ಟು 1 ಕೋಟಿ 59 ಸಾವಿರದ 334 ರೂ. ಹಣ ಒಟ್ಟಾರೆ ಸಂಗ್ರಹವಾಗಿದೆ.

ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಗಳು ದೇವಾಲಯದ ಆವರಣದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯವನ್ನು ಮಾಡಿದರು. ಸ್ತ್ರೀಶಕ್ತಿ ಸಂಘಗಳ ಮಹಿಳಾ ಸದಸ್ಯರ ನೆರವಿನೊಂದಿಗೆ ಈ ಕಾರ್ಯ ನಡೆಯಿತು. 65 ಗ್ರಾಂ. ಚಿನ್ನ ಮತ್ತು 3.5 ಕೆಜಿ ಬೆಳ್ಳಿ ಮತ್ತು 11 ವಿದೇಶಿ ಕರೆನ್ಸಿಗಳೂ ಸಹ ಹುಂಡಿಯಲ್ಲಿ ಸಿಕ್ಕಿವೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ್, ಎಇಒ ಗಂಗಯ್ಯ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎಸ್.ಮೋಹನ್, ಸದಸ್ಯರಾದ ಶಿವನಾಗಪ್ಪ, ಮಲ್ಲಿಕಾರ್ಜುನ್ ಮುಂತಾದವರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಅಂದಹಾಗೆ ನಂಜನಗೂಡಿನಲ್ಲಿ ಏಪ್ರಿಲ್‌ 1ರಂದು ವಾರ್ಷಿಕ ರಥೋತ್ಸವ ನಡೆದಿತ್ತು. ಕಳೆದ ವರ್ಷದಂತೆ ಈ ವರ್ಷವೂ ರಥದ ಚಕ್ರ ಮಾರ್ಗಮಧ್ಯೆ ಸಿಲುಕಿಕೊಂಡು ಭಕ್ತರಲ್ಲಿ ಆತಂಕ ಮೂಡಿಸಿತ್ತು. ಜೆಸಿಬಿ ನೆರವಿನಿಂದ ರಥವನ್ನು ಮೇಲೆತ್ತಿ ರಥೋತ್ಸವ ನಡೆಸಲಾಯಿತು.

Write A Comment